ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆ
ನರನ ಪ್ರಾಕ್ತನಕೆ ನೂತನಸತ್ತ್ವ ಬೆರೆತು
ಪರಿವುದೀವಿಶ್ವಜೀವನಹರಿಯನವರತ
ಚಿರಪ್ರತ್ನನೂತ್ನ ಜಗ - ಮಂಕುತಿಮ್ಮ