ಅಣುಸಂಖ್ಯೆಯೆಣೆಸುವನು ವಿಶ್ವದಲಿ ವಿಜ್ಞಾನಿ
ಗುಣಿಸುವನು ಭೂತಶಕ್ತಿಗಳನದರಿಂದೇಂ?
ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ತ್ವ
ವಣಗಿಹುದು ಮೂಲವದು - ಮಂಕುತಿಮ್ಮ