ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ
ಚಲಿಸದೆನಿಸದ ಜಡವನಾದ ಗಾಳಿಯೊ ಸೋಕೆ
ಬಲ ತೀವಿ ಚಲಿಸುವುದು - ಮಂಕುತಿಮ್ಮ