ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು

ಜಪತಪಕೆ ಮೇಣ್ ಹೋಮಹವನಕೆ ಮಿಗಿಲು | ಸಕಲಫಲಕದು ಸಮವು ಆತ್ಮದರಿವಿನ ಫಲ ಅರಿವಿನ ಪೂಜೆಯಿಂ ಪರಮಪದ ಮೂಢ ||
ವಿಷಯ ಬಿಟ್ಟವನು ಎನಿಸುವನು ಸಂನ್ಯಾಸಿ ಮುಕ್ತಿಮಾರ್ಗಕಿದು ಕಠಿಣತಮ ಹಾದಿ | ವಿವೇಕಿ ತಾ ಫಲಬಯಸದಾ ಕರ್ಮದಿಂ ಸರಳ ದಾರಿ ಹಿಡಿಯುವನು ಮೂಢ || ************************ -ಕ.ವೆಂ.ನಾಗರಾಜ್.