ಮಂತ್ರ ಪಠಿಸಿದೊಡೇನು ಅರ್ಥವನರಿಯದೆ

ಜಪವ ಮಾಡಿದೊಡೇನು ಒಳತುಡಿತವಿರದೆ |

ವಿಚಾರವಿರದಾಚಾರದ ಬದುಕು ಬದುಕಲ್ಲ

ಕಾರ್ಯದಲರ್ಥವಿರಲು ಬೆಳಕು ಮೂಢ ||


ಕಣ್ಮುಚ್ಚಿ ಮಣಮಣಿಸೆ ಜಪವೆನಿಸುವುದೆ

ಒಳಗಣ್ಣು ತೆರೆದು ಧ್ಯಾನಿಪುದೆ ಜಪವು |

ಮಡಿ ಮೈಲಿಗೆಯೆಂದು ಪರದಾಡಿದೊಡೇನು

ಮನಶುದ್ಧಿಯಿಲ್ಲದಿರೆ ವ್ಯರ್ಥ ಮೂಢ ||

****************

-ಕ.ವೆಂ.ನಾಗರಾಜ್.