ಪೂಜೆ ಮಾಡಿದೊಡೆ ಪಾಪ ಹೋಗುವುದೆ

ತನುಶುಚಿಯಾಗಲು ಮನಶುಚಿಯಾಗುವುದೆ |

ಪಾಪ ಪುಣ್ಯಗಳ ಕೊಡುವವನು ಅವನಲ್ಲ ನಿನ್ನ ನೀನರಿಯದಿರೆ ಫಲವಿಲ್ಲ ಮೂಢ ||
ಕಲಿವ ಶ್ರಮವಿರದೆ ಅರಿವು ಬಂದೀತೆ ಇರುವಲ್ಲೆ ನಿಂತಿರಲು ದಾರಿ ಸವೆದೀತೆ | ಆರಂಭವದು ವಿಷ ಅಂತ್ಯದಲಿ ಅಮೃತವು

ಪರಮಪದಕಾಗಿ ಪರಿತಪಿಸು ಮೂಢ ||

****************

-ಕ.ವೆಂ.ನಾಗರಾಜ್.