
--------------------------------------------------------------------------

---------------------------------------------------------------------------
ಹಣೆಯ ಮೂಲಕ ಗುಂಡು ಹೊಕ್ಕು, ಕುತ್ತಿಗೆಯಿಂದ ಹೊರಗೆ ಬಂದಿತ್ತು. ಈ ಹುಡುಗ ಸತ್ತಿದ್ದಾನೆ ಎಂದು ಪೊಲೀಸರು ಭಾವಿಸಿ ಆಸ್ಪತ್ರೆಗೆ ಸಾಗಿಸಲಿಲ್ಲ.ಆಸ್ಪತ್ರೆಗೆ ಮಗನ ದೇಹ ಒಯ್ದ ತಂದೆಯ ಬಳಿ ವೈದ್ಯರು ಹುಡುಗ "ತೀರಿ ಹೋಗಿದ್ದಾನೆ" ಎಂದೂ ಹೇಳಿದ್ದರು. ಆದರೆ ಸ್ವಲ್ಪ ಹೊತ್ತಿನ ನಂತರ ಆ ದೇಹವನ್ನು ಶವಾಗಾರದೆಡೆ ಒಯ್ಯುತ್ತಿದ್ದಾಗ,ಹುಡುಗನ ದೇಹ ಅಲುಗಾಡ ತೊಡಗಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗುಂಡನ್ನು ಹೊರತೆಗೆದರು. ಆ ಹುಡುಗ ಈಗಲೂ ಬದುಕಿದ್ದಾನೆ. ಶಾಲೆಗೆ ಹೋಗುವಷ್ಟು ಹುಷಾರಾಗಿದ್ದಾನೆ. ಅಂದ ಹಾಗೆ ಅವನ ತಾಯಿಗೆ ಬಿದ್ದ ಗುಂಡು ಎದೆಯ ಮೂಲಕ ಹಾದು ಹೋಗಿತ್ತು-ಹೃದಯ ಭೇದಿಸಿರಲಿಲ್ಲ ಅಷ್ಟೆ. ಮನಕರಗಿಸುವ ಈ ನೈಜ ಘಟನೆ ___LINK_OPEN_href="http://www.hindu.com/mag/2008/09/07/stories/2008090750080300.htm" target="_blank" title="ಅಜರ್"___ಇಲ್ಲಿದೆ.

------------------------------------------------------------------
ನಿಮ್ಮಲ್ಲಿ ಹಣ ಇದ್ದು ಆಸ್ತಿ ಖರೀದಿಸಲು ಬಯಸುವಿರಾದರೆ, ಅಮೆರಿಕಾದಲ್ಲಿ ಆಸ್ತಿ ಖರೀದಿಸಿ-ಬೆಂಗಳೂರಲಲ್ಲ!
ಯಾಕೆಂದು ನಿಮಗೆ ಗೊತ್ತೇ ಇದೆ-ಅಲ್ಲಿ ಬ್ಯಾಂಕ್ ದಿವಾಳಿ ಪ್ರಕರಣಗಳ ನಂತರ ಆಸ್ತಿಯ ಮೌಲ್ಯ ಅರ್ಧಕ್ಕರ್ಧ ಇಳಿದಿದೆ.ಈಗ ಭಾರತೀಯರೂ ವಿದೇಶಗಳಲ್ಲಿ ಆಸ್ತಿ ಖರೀದಿಸಲು ಅವಕಾಶ ಇದೆಯಂತೆ.
___LINK_OPEN_href="http://economictimes.indiatimes.com/HNIs_eye_cheap_property_in_US_as_prices_drop/articleshow/3453397.cms" target="_blank" title="ಇಟಿ"___ಪುಕ್ಕಟೆ ಸಲಹೆ ಇಲ್ಲಿದೆ.
ಅಂದ ಹಾಗೆ ನಮ್ಮ ಸರಕಾರ ಆಫ್ರಿಕಾದಲ್ಲಿ ಎಕರೆಗಟ್ಟಲೆ ಕೃಷಿ ಭೂಮಿ ಖರೀದಿಸಲು ಯೋಚಿಸುತ್ತಿದೆಯಂತೆ-ನಮ್ಮ ಕೃಷಿ ಭೂಮಿಯನ್ನು ಟಾಟಾ-ಬಿರ್ಲಾಗಳಿಗೆ ಉದ್ಯಮಕ್ಕಾಗಿ ನೀಡಬೇಕಾಗಿದೆಯಲ್ಲ-ಸಿಂಗೂರಿನಲ್ಲಿ ಮಾಡಿದಂತೆ!
--------------------------------------------------------------

--------------------------------------------------------------
ಪುರಾಣಕಾಲದಲ್ಲಿ ಹೆಂಗಸರದ್ದೇ ರಾಜ್ಯಗಳಿದ್ದುವಂತಲ್ಲ. ಸಿನೆಮಾದಲ್ಲಿ ಹೆಂಗಸರೇ ಇದ್ದರೆ ಹೇಗೆ? ___LINK_OPEN_href="http://www.dnaindia.com/report.asp?newsid=1188192" target="_blank" title="isha"___ಇಶಾ ಆ ಬಗ್ಗೆ ಆಲೋಚಿಸುತ್ತಿರುವಂತಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!