ತನುವೇನು? ಮನುವೇನು? ಪರಮಾಣು ಸಂಧಾನ
ಕುಣಿಸುತಿಹುದುಭಯವನು ಮೂರನೆಯದೊಂದು
ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು
ದಣಿಯದದನರಸು ನೀಂ - ಮಂಕುತಿಮ್ಮ