ವಿರಳ ಮಾನವಜನ್ಮ ಪುಣ್ಯಪಾಪದ ಫಲವು
ವಿರಳವು ಹುಟ್ಟಿನ ಮಹತಿ ಗುರಿಯರಿವು |
ವಿರಳರು ಅರಿವರಿತು ಸರಿದಾರಿ ಹಿಡಿವವರು
ವಿರಳಾತಿವಿರಳ ಮುಕ್ತಿ ಪಡೆವವರು ಮೂಢ || ..245
ನುಡಿದಂತೆ ನಡೆಯುವರು ಸಟೆಯನಾಡರು
ಚಿತ್ತದಲಿ ಶಾಂತಿ ಹಿರಿಯರಲಿ ಗೌರವ |
ಅಲೋಲುಪ ಅಚಾಪಲ ತ್ಯಾಗಿಗಳವರು
ದೇವಮಾನವರವರೆ ಮೂಢ || ..246
********************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (2)