ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ
ಮಾನವಂ ಪ್ರಣಯದೊಳೊ ವೀರ ವಿಜಯದೊಳೋ
ಏನೊ ಎಂತೋ ಸಮಾಧಾನಗಳನರಸುತಿಹ
ನಾನಂದವಾತ್ಮಗುಣ - ಮಂಕುತಿಮ್ಮ