ಬುದ್ಧಿಗೂ ಹೃದಯಕೂ ಎನಿತೊಂದು ಅಂತರ
ಬುದ್ಧಿಯದು ಚಮತ್ಕಾರ ಹೃದಯದಿಂದುಪಕಾರ |
ಬುದ್ಧಿಯ ಬಲದಲಿ ಜಗವನೆ ಗೆಲಲೇಕೆ
ಹೃದಯವಂತ ಜಗದೊಡೆಯ ಮೂಢ || .. 249
ಹೃದಯವಿರದ ಬುದ್ಧಿ ಅಪಾಯ ತಂದೀತು
ಸ್ವಾರ್ಥ ಮೇಲಾಗಿ ಲೋಕಕಪಕಾರಿಯಾದೀತು |
ಹೃದಯದ ಒಲವಿರಲು ಬುದ್ಧಿ ಜೊತೆಗಿರಲು
ಲೋಕವೊಪ್ಪಿ ಅಹುದೆನದೆ ಮೂಢ || .. 250
**************************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (3)