ಮೇಲು ಕೀಳುಗಳಿಗೆ ಕಾರಣರು ಪರರಲ್ಲ

ಆಲಸಿಕೆ ಕುಚಟಗಳ ದಾಸರಾಗರೆ ಕೀಳು |

ಮುನ್ನಡೆಯ ಹಂಬಲಿಸೆ ಆಗುವರು ಮೇಲು

ಪರರ ದೂಷಿಸಿ ಫಲವೇನು ಮೂಢ || .. 251


 

ಸಮರಾರಿಹರು ಜಗದೊಳು ಸಮರಾರಿಹರು

ಅಸಮಾನರೆನಿಸೆ ಹಂಬಲಿಸಿ ಹೋರಾಡುತಿಹರು |

ಗುರಿ ಸಮನಿರಬಹುದು ದಾರಿ ಸಮನಹುದೆ

ನಿಜಸಮತೆ ಕಂಡೀತು ಸಾವಿನಲಿ ಮೂಢ || .. 252

***************

-ಕ.ವೆಂ.ನಾಗರಾಜ್.