ಹೊರಗಾವುದೊಳಗಾವಿದೀ ಸೃಷ್ಟಿಚಕ್ರದಲಿ
ಎರಡನೊಂದಾಗಿಪುದು ಹರಿವ ನಮ್ಮುಸಿರು
ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ
ಬರಿ ಸುಷಿರಪಿಂಡ ಜಗ - ಮಂಕುತಿಮ್ಮ