ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ
ನರಕವೆಂಬುದಿದೆ ಪಾಪ ಕಳೆಯುವ ತನಕ |
ನಿನ್ನೊಳಗೆ ನಾನು ನನ್ನೊಳಗೆ ನೀನೆನಲು
ಸಚ್ಚಿದಾನಂದಭಾವ ಕೊನೆತನಕ ಮೂಢ || ..257
ಸ್ವರ್ಗವನು ಬಯಸುವರು ಕಾಮಿಗಳು ಕೇಳು
ನಿಜಭಕ್ತರವರಲ್ಲ ಜ್ಞಾನಿಗಳು ಮೊದಲಲ್ಲ |
ಅಂಜಿಕೆಯ ಮೇಲೆ ನರಕ ನಿಂತಿರಲು
ಆಸೆಯೇ ಸಗ್ಗಕಾಧಾರ ಮೂಢ || ..258
****************************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (4)