ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು

ಮೊಳಕೆ ಬೆಳೆದೀತು ಕಾಣುವ ನೋಟವಿರೆ 
ಮನನದ ನೀರೆರೆದು ಅನುಭವದಿ ಕಳೆಕೀಳೆ
ಅದ್ಭುತಾಮೃತ ಫಲ ನಿನದೆ ಮೂಢ || ..261


ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ || ..262
*************
-ಕ.ವೆಂ.ನಾಗರಾಜ್.