ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ || ..263
ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು
ಇಂದ್ರಿಯಾಶ್ವವನು ಚಿತ್ತ ಹಿಡಿದಿಹುದು |
ಒಡೆಯ ಹೇಳ್ದಂತೆ ಸಾಗುವನು ಸಾರಥಿಯು
ಒಡೆಯನಾರೆಂದು ತಿಳಿದಿಹೆಯ ಮೂಢ || ..264
*******************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (5)