ಪ್ರಿಯರಾರು ಆರಿಸೆನೆ ಅನ್ಯರನು ತೋರುವರೆ
ಸತಿಸುತರನಾರಿಸರು ಬಂಧುಗಳನಾರಿಸರು |
ಹಿರಿಯರನಾರಿಸರು ದೇವರದೇವನಾರಿಸರು
ತಾವೆ ಮಿಗಿಲೆಂಬರು ಇದು ಸತ್ಯ ಮೂಢ || ..279
ಸಕಲವನು ಬಯಸುವ ಲೋಭದ ಪರಿಯೇನು
ಅಹಮಿಕೆಯು ತಾನೆರಗಿ ಮೆರೆದಿಹ ಸಿರಿಯೇನು |
ಗೆಲ್ಲಹೊರಟಿಹುದೇನು ಬಾಳಲಾರದ ಮನುಜ
ಮಾಯೆಯ ಮುಸುಕು ಸರಿದೀತೆ ಮೂಢ || ..280
*************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (3)