ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು
ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು |
ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು
ಸುಳ್ಳಿನ ಗುಳ್ಳೆಯೊಡೆದೀತು ಮೂಢ || ..281
ಮಾಯೆಯಲಿ ಸೊಗವು ಮಾಯೆಯಲಿ ಜಗವು
ಮಾಯೆಯಲಿ ನಲಿವು ಮಾಯೆಯಲಿ ನೋವು |
ಮಾಯಾವಿ ಮಾಯೆಯಿಂ ಜಗವು ನಡೆದಿಹುದು
ಮಾಯೆಯಿಲ್ಲದಿರೆ ಜಗವೆಲ್ಲಿ ಮೂಢ || ..282
*********************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (3)