ಪುಣ್ಯ ಪಾಪ ಋಣಾನುಬಂಧ ವಾಸನೆಗಳಿವು
ಜನ್ಮಾಂತರದ ಕರ್ಮಶೇಷದಂಶಗಳು
ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು
ಸನ್ನಿಹಿತ ದೈವಿಕದೆ - ಮಂಕುತಿಮ್ಮ