ಮೂಢ ಉವಾಚ - 17

 

ಮನೆಯ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ|

ನಗ ನಾಣ್ಯ ಸಿರಿ ಸಂಪದವ ತುಂಬಿಟ್ಟರಿಲ್ಲ||

ನಿಂತ ನೀರು ಕೊಳೆತು ನಾರುವುದು ನೋಡ|

ಕೂಡಿಟ್ಟವರ ಪಾಡು ಬೇರಲ್ಲ ಮೂಢ||

 

ಆಳಿದವರಳಿದುಳಿಸಿಹುದೇನು ಕೇಳು|

ಮನೆ ಮಹಲು ಸಿರಿ ನಗವ ಕೊಂಡೊಯ್ವರೇನು?||

ಅವಗುಣವ ಶಪಿಸಿ ಜನರು ಗುಣವ ನೆನೆವರು|

ಎರಡು ದಿನದಲಿ ಎಲ್ಲ ಮರೆಯುವರು ಮೂಢ||