ಇಂದು ಮದುವೆಯ ಹಬ್ಬ ; ನಾಳೆ ವೈಕುಂಠ ತಿಥಿ
ಇಂದು ಮೃಷ್ಟಾನ್ನ ಸುಖ ; ನಾಳೆ ಭಿಕ್ಷಾನ್ನ
ಇಂದು ಬರಿಯುಪವಾಸ, ನಾಳೆ ಪಾರಣೆ-ಯಿಂತು
ಸಂದಿರುವುದನ್ನ ಋಣ - ಮಂಕುತಿಮ್ಮ