ಅರಿ ಮಿತ್ರ ಸತಿ ಪುತ್ರ ಬಂಧುಬಳಗವದೆಲ್ಲ
ಕರುಮದವತಾರಗಳೊ,ಋಣಲತೆಯ ಚಿಗುರೋ
ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ
ವುರಿಮಾರಿಯಾದೀತೊ - ಮಂಕುತಿಮ್ಮ