ಕರುಮ ಬಂದಿದಿರಹುದು ಮೋಹನದ ರೂಪಿನಲಿ
ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ  
ಕರೆದುತಳ್ಳುವ ತಳ್ಕರಿಸುತೊಳಗೆ ಕಿಚ್ಚಿಡುವ
ತರಳತೆಯದೇಂ ತಂತ್ರ? - ಮಂಕುತಿಮ್ಮ