ಮೂಢ ಉವಾಚ - 18
ಒಡಲಗುಡಿಯ ರಜತಮಗಳ ಗುಡಿಸಿ|
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ||
ಮನದ ಕತ್ತಲೆ ಕಳೆದು ತಿಳಿವಿನ ಬೆಳಕ|
ಪಸರಿಪುದೆ ದೀಪಾವಳಿ ತಿಳಿ ಮೂಢ||
ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ|
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ||
ಶುಭ ಹರಸಿ ತಿಲ ಬೆಲ್ಲ ಕೊಡುಕೊಳುವ ಕಾಲ|
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ||
ಪ್ರತಿಕ್ರಿಯೆ (4)