___LINK_OPEN_href="/attachment/?view=att&th=1392fa37f40d0b95&attid=0.4&disp=attd&realattid=f_h5xw16kg3&zw"___Download the original attachment
ದೇವರು ಕಣ್ಮುಂದೆ ಚಲಿಸುವ
ಎಲ್ಲ ಸಾದೃಶ್ಯ ಅಸಾದೃಶ್ಯ
ಚರಾಚರ ವಸ್ತಗಳಲ್ಲಿದ್ದಾನೆ
ಆದರೆ ಸತ್ಯ ? ಅದು ಅಗೋಚರ
ಹೃದಯಕ್ಕೆ ವೇದ್ಯ
ದೇವರಿಗಿಂತ ಸತ್ಯ ದೊಡ್ಡದು
***
ಬದುಕು ಒಂದು ಯಕ್ಷ ಪ್ರಶ್ನೆ
ವಿವೇಚನೆ ಮತ್ತು
ಮಾನವೀಯತೆ ಗಳಿದ್ದಲ್ಲಿ ಮಾತ್ರ
ಉತ್ತರ ಸಾಧ್ಯ
ಕತ್ತಲು ಓಡಿಸಲು ಬೆಳಕು
ಬರುವಂತೆ ಬದುಕು ವಿಶ್ಲೇಷಿಸಲು
ವಿವೇಚನೆ ಬೇಕು
***
ಪ್ರೇಮ ಅನುಕಂಪ ದಯೆಗಳು
ಇಲ್ಲದ ಜನರ ನಡುವಿನ ಬದುಕು
ಕಾಗೆಗಳ ಸಂಗದಲಿ
ಕೋಗಿಲೆಯ ಬದುಕಂತೆ
***
ಪ್ರತಿಕ್ರಿಯೆ (1)