ಚಿಕ್ಕೆ ಮೂಡಿದ್ದನ್ನು ನೋಡಿ ಗುರುತಿಸಿದವರು
ಮರುಭೂಮಿಯಲ್ಲಿ ನಡೆದವರು
ದಣಿದವರು,
ಸಂತೋಷಪಟ್ಟರು.
ಬೆತ್ಲಹೀಮದ ಕೊಟ್ಟಿಗೆಯ ಹುಲ್ಲುಬಾಗಿಯಲಿ
ಪ್ರೀತಿ, ಕರುಣೆ,
ಮೂಡಿಬಂದಿತ್ತು
ಮತ್ತೊಂದು ನಕ್ಷತ್ರ.

ಬಿಳಿಯ ಕುರಿಮರಿಯನ್ನು ಎದೆಗವಚಿಕೊಂಡು
ಕುರಿಗಾಹಿಗಳಿಗೆಲ್ಲ ಯೇಸು ಹೇಳಿದನು:
'ಹುಲ್ಲುಗಾವಲನಲೆದು, ಬೆಟ್ಟದ ತಪ್ಪಲಲಿ ಮೇದು,
ಕುರಿಗಳೆಲ್ಲ ನೀರಡಸಿಹವು.
ಎಂದಿಗೂ ಅರದಿಹ ಸೆಲೆಗೆ ಕರೆತಂದು
ನೀರು ಕುಡಿಸಿರಿ ಎಲ್ಲ ಕುರಿಗಳಿಗೆ' ಎಂದು.

ಅಲಿವ ಮರಗಳ ಬೆಟ್ಟದಲಿ ಕುಳಿತು ಒಮ್ಮೆ
ಯೇಸು ಹೇಳಿದ 'ಎಲ್ಲರನ್ನು ಪ್ರೀತಿಸಿರಿ,
ನೊಂದವರ ಉರಿ ಕರುಣೆಂದ ಅರಿತಿರಿ,
ನವ್ರುವಾಗಿರಿ, ದೇವರನ್ನು ಧ್ಯಾನಿಸಿರಿ,
ಬೇಡಿಕೊಳ್ಳಿರಿ, ಕೊಡುವ ಜಗದ ತಂದೆ.
ಹುಡುಕಿರಿ ಅವನನ್ನು ಸಿಗುವ ಇಂದೆ.
ಹಣವ ಕೂಡಿಸಲೆಂದು ಹೆಣಗಾಡದಿರಿ
ಗದ್ದೆಯಲ್ಲಿಹ ಹೂವ ನೋಡಿ ಕಲಿರಿ
ಒಮ್ಮೆಯೂ ಬಿತ್ತಿಲ್ಲ ಬೆಳೆದಿಲ್ಲ, ಆದರೂ
ಯಾವ ದೊರೆಗಿದೆ ಅಂಥ ಚೆಲುವು ವೈಭವವು?

ಹನ್ನೆರಡು ಕುರುಬರು ಹಿತವಚನ ಕೇಳಿದರು,
ಈ ದಿವ್ಯ ಸೆಲೆಂದ ಜಲ ಕುಡಿದರು,
ಹಸಿರು ತಪ್ಪಲಿನಲ್ಲಿ ಹಸಿವು ಹಿಂಗಿಸಿ ದಣಿದ
ಕುರಿಗಳನು ಸೆಲೆಯತ್ತ ಕರೆದೊಯ್ದರು.
ಗೊಲ್ಗೊಥಾದಲ್ಲಿ ಕೊಲ್ಗಂಬಕೆಳೆದಿತ್ತು.
ತನ್ನ ಶೂಜೆಯ ತಾನೆ ಹೊತ್ತು
ಯೇಸು ನಡೆದ.

ಮರುಕ ತುಂಬಿದ ಹೃದಯದಲ್ಲಿ ಮೊಳೆ
ಹೊಡೆದವರು.
ಇತಿಹಾಸದಲ್ಲಿ ಕಸವಾಗಿ ನಡೆದವರು,
ಎಲ್ಲರನ್ನೂ ಕ್ಷಮಿಸಿ,
ಎಲ್ಲವನ್ನೂ ಸಹಿಸಿ,
ಜಗದ ನೋವಿಗೆ ನೊಂದನೀ ಮಹಾತ್ಮ,
ಕೊಂದರೂ ಕರುಣೆ ತೋರಿದ ಹುತಾತ್ಮ.

ಕ್ರೈಸ್ತ ಬಾಂಧವರಿಗೆಲ್ಲಾ ಕ್ರಿಸ್ಮಸ್ ಹಬ್ಬದ ಮುಂಗಡ ಶುಭಾಶಯಗಳು.