ಮೂಢ ಉವಾಚ -20

ಪರರ ನಡವಳಿಕೆಗಳೆನ್ನ ಮನವ ಕದಡದಿರಲಿ|

ಕಿರಿಪಿರಿಯ ಮಾತುಗಳಿಗೆನ್ನ ಜಿಹ್ವೆ ಪ್ರತಿಯಾಡದಿರಲಿ||

ಆಲಿಸಲಿಚ್ಛಿಸದ ಕಿವಿಗಳಿಗೆ ಉಪದೇಶ ವ್ಯರ್ಥ|

ಎನ್ನ ಭಾವನೆಗಳೆನಗಿರಲೆಂಬುದೇ ಅಂತರಾರ್ಥ ಮೂಢ||

 

ಪರರೆಂತಿರಬೇಕೆಂದು ಬಯಸುವುದು ನೀನು?|

ಅಂತಪ್ಪ ಮಾದರಿಯು ಮೊದಲಾಗು ನೀನು||

ಬದಲಾಗು ನೀ ಮೊದಲು ಬದಲಾಗು ನೀನು|

ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||