ಮೂಢ ಉವಾಚ -21

ಮತಿಗೆಟ್ಟು ಅರಚಾಡಿ ಬಂದ ಫಲವೇನು?|

ಸಿಟ್ಟಿನಿಂ ನಡುನಡುಗಿ ಗುಡುಗಿದರೆ ಬಂತೇನು?||

ತಪ್ಪು ಒಪ್ಪುಗಳ ತಳ್ಳಿ ಪ್ರತಿಭಟಿಸದಿರರೇನು?|

ಸಮಚಿತ್ತದಕ್ಕರೆಯೊಂದೆ ಒಲಿಸುವುದು ಮೂಢ||

 

ನೀ ಸರಿಯಾಗಿದ್ದರದುವೆ ಸಾಕು|

ಪರರ ಗೊಡವೆ ನಿನಗೇಕೆ ಬೇಕು?||

ತಿದ್ದುವ ಹಂಬಲಕೆ ಕಡಿವಾಣ ಹಾಕು|

ಮನವನನುಗೊಳಿಸಿ ಶಾಂತನಿರು ಮೂಢ||