ಮೂಢ ಉವಾಚ -22
ಕೇಳಲೊಲ್ಲದ ಕಿವಿಗೆ ನೀತಿಪಾಠವದೇಕೆ?|
ತಿನ್ನಲೊಲ್ಲದ ಬಾಯಿಗೆ ಷಡ್ರಸವದೇಕೆ?||
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು|
ಪಾತ್ರಾಪಾತ್ರರನರಿತಡಿಯಿಡು ಮೂಢ||
ಹುಂಬರೊಟ್ಟಾಗಿ ಹಂಗಿಸುತ ಜರೆದಿರಲಿ|
ಮನೆಮಂದಿಯೇ ನಿನ್ನ ಹೀಗಳೆಯುತಿರಲಿ||
ಕೆರಳದಿರಲಿ ಕೊರಗದಿರಲಿ ಮನವು|
ಧೃತಿಗೆಟ್ಟು ದಾರಿ ತಪ್ಪದಿರಲಿ ಮೂಢ||
ಪ್ರತಿಕ್ರಿಯೆ (4)