ಮೂಢ ಉವಾಚ -33

 

ಧೃತರಾಷ್ಟ್ರನಾ ಮೋಹ ಮಕ್ಕಳನೆ ನುಂಗಿತು
ಪುತ್ರವ್ಯಾಮೋಹವದು ನೀತಿಯನೆ ತಿಂದಿತು
ಮನಮೋಹಕ ಮೋಹ ಬಿಗಿದೀತು ಸಂಕಲೆಯ
ಸುತ್ತೀತು ಭವಬಂಧನದ ಪಾಶ ಹೇ ಮೂಢ

ನನದೆಂಬ ನನ್ನವರೆಂಬ ಭಾವವದು ಮೋಹ
ಪರದಾಟ ತೊಳಲಾಟ ಸಂಕಟಗಳ ಮೂಲ
ಸುರತಿಯಾಂತ್ಯದಲಿ ಹೆಣ್ಣು ಗಂಡುಜೇಡವನು
ತಿಂಬಂತೆ ಮೋಹ ಜೀವನವ ತಿಂದೀತು ಮೂಢ

 ************
-ಕವಿನಾಗರಾಜ್.