ಈ ಜೋಕುಗಳ ಮೂಲ ಇರುವುದು ನನ್ನ ಬ್ಲಾಗ್
http://shivagadag.blogspot.com ನಲ್ಲಿ
ಸಂಪದ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ..
೧) ಇದನ್ನು ಕಳಿಸಿದವರು:- ----
ಗೆಳತೀ,..
ಚಂದ್ರನ ಮೇಲೆ ನಿನ್ನ ಹೆಸರ
ಬರೆಯುವ ಆಸೆ ನನಗೆ..
ಆ ಚಂದ್ರನ ಮೇಲೆ ನಿನ್ನ ಹೆಸರ
ಬರೆವ ಆಸೆ ನನಗೆ..
ಆದರೆ ಈ ಯೋಚನೆ,
ಅಮಾವಾಸ್ಯೆಯ ದಿನವೇ ಬರುತ್ತದೆ ನನಗೆ..
೨) ಇದನ್ನು ಕಳಿಸಿದವರು:- ಮಹೇಶ್ ಭುವಳ್ಳಿ
ಜೈಲರ್:- ನಾಳೆ ಬೆಳಿಗ್ಗೆ ೫ ಗಂಟೆಗೆ ನಿನಗೆ ಗಲ್ಲು ಶಿಕ್ಷೆ.
ಸರ್ದಾರ್:- ಹ್ಹ ಹ್ಹಹ್ಹ.. ಹ್ಹ..ಹ್ಹಹ್ಹ..
ಜೈಲರ್:- ಯಾಕೆ ನಗ್ತಾ ಇದೀಯ?
ಸರ್ದಾರ್:- ನಾನು ದಿನಾ ಬೆಳಿಗ್ಗೆ ಏಳೋದೇ ೭ ಗಂಟೆಗೆ...
೩) ಇದನ್ನು ಕಳಿಸಿದವರು:- ಜಗದೀಶ
ಸಾರ್ವಕಾಲಿಕ ಸತ್ಯ:-
ನೀವು ಒಂದು ಹುಡುಗಿ ಕಷ್ಟದಲ್ಲಿದ್ದಾಗ ಸಹಾಯ ಮಾಡಿದರೆ,
ಅವಳು ಖಂಡಿತಾ ನಿಮ್ಮನ್ನು ನೆನಪಿಸಿಕೊಳ್ಳುವುದು, ಅವಳಿಗೆ ಮತ್ತೆ ಕಷ್ಟ ಬಂದಾಗಲೇ....
೪) ನಾನು ನೀರಿನಲ್ಲಿ ರಮ್ ಬೆರೆಸಿ ಕುಡಿದೆ, ನಶೆ ಏರಿತು
ನಾನು ನೀರಿನಲ್ಲಿ ವಿಸ್ಕಿ ಬೆರೆಸಿ ಕುಡಿದೆ, ನಶೆ ಏರಿತು
ನಾನು ನೀರಿನಲ್ಲಿ ಬ್ರ್ಯಾಂಡಿ ಬೆರೆಸಿ ಕುಡಿದೆ, ಆಗಲೂ ನಶೆ ಏರಿತು..
ಥತ್..! ಈ ಹಾಳು ನೀರನ್ನು ಕುಡಿಯಲೇ ಬಾರದು ಅಂತಾ ತೀರ್ಮಾನ ಮಾಡಿದೀನಿ..
5) ಇದನ್ನು ಕಳಿಸಿದವರು:- ಅಶ್ವಿನ್. ಮಧುಗಿರಿ
ನಿನ್ನ ತಲೆ ಮೇಲೆ ಕೊಂಬು ಇದೆಯಾ..??
ಇಲ್ಲ
ಜಸ್ಟ್ ಚೆಕ್ ಇಟ್..
ಚೆಕ್ ಮಾಡಿದ್ಯಾ??
ಯೆಸ್
ಕೊಂಬು ಇಲ್ಲ ತಾನೆ??
ಇಲ್ಲ
ಆರ್ ಯು ಸ್ಯೂರ್??
ಯೆಸ್..
ಹೋಗ್ಲಿ ಬಿಡು... ಕೋತಿಗೂ ಇರಲ್ಲಾ...
6) ಇದನ್ನು ಕಳಿಸಿದವರು:- ಭಕ್ತ (ಜ್ಞಾನಿ) ಬೆಂಗಳೂರು
ಟೀಚರ್:- ಮಕ್ಕಳೇ.. ನಿಮ್ಮ ಕ್ಯಾರಕ್ಟರ್ ಚನ್ನಾಗಿ ಇರಬೇಕು ಅಂದ್ರೆ, ಎಲ್ಲಾ ಹೆಂಗಸರನ್ನು ನಿಮ್ಮ ಅಮ್ಮ ಅಂತಾ ತಿಳ್ಕೊಬೇಕು..
ಗುಂಡ:- ಎಲ್ಲರನ್ನೂ ಅಮ್ಮ ಅಂತಾ ತಿಳ್ಕೊಂಡ್ರೆ, ನಮ್ ಅಪ್ಪನ ಕ್ಯಾರಕ್ಟರ್ ಹಾಳಾಗುತ್ತೆ ಮಿಸ್..
೭)ಇದನ್ನು ಕಳಿಸಿದವರು:- ಮಮ್ಮಿ (ಮಂಜುಳಾ) ಹೊಸಕೋಟೆ/ದೊಡ್ಡನಲ್ಲೂರಹಳ್ಳಿ
ಹುಡುಗೀರ ಕೈನ ಮೊದಲ ಸಲ ಮುಟ್ಟಿದಾಗ ಮಾತ್ರ ಕರೆಂಟ್ ಹೊಡೆಯುತ್ತೆ.....
ಆಮೇಲೆ... ಕೇವಲ ಬಿಲ್ ಮಾತ್ರ ಬರ್ತಾ ಇರುತ್ತೆ....
8) ಇದನ್ನು ಕಳಿಸಿದವರು:- ಯದು ಢಾಭಾ. ಚಿಕ್ಕನಾಯಕನಹಳ್ಳಿ
ನೀವು ನಿಮ್ಮದೇ ಆದ ಸ್ಟೈಲ್ ನಲ್ಲಿ ಮಾತನಾಡಿರಿ
ನಿಮ್ಮದೇ ಆದ ರೀತಿಯಲ್ಲಿ ಯೋಚನೆ ಮಾಡಿರಿ..
ನಿಮ್ಮದೇ ಆದ ದಾರಿಯಲ್ಲಿ ನಡೆಯಿರಿ.....
ಆಗ ಜನರು ಹೇಳುವರು..
"ಗೂಬೆ ಮುಂಡೇದು.. ಯಾರ್ ಮಾತೂ ಕೇಳಲ್ಲಾ...."
9) ಇದನ್ನು ಕಳಿಸಿದವರು:- ಯದು ಢಾಭಾ ಚಿಕ್ಕನಾಯಕನಹಳ್ಳಿ
ಯಾರು ಒಂದು ಸಿಗರೇಟ್ ಸೇದಿಲ್ಲವೋ. ಒಂದು ಗುಟ್ಕಾ ಹಾಕಿಲ್ಲವೋ
ಒಂದು ಬಿಯರನ್ನಾದ್ರೂ ಕುಡಿದಿಲ್ಲವೋ..
ಕಾಲೇಜ್ ನಲ್ಲಿ ಮೋಜು ಮಸ್ತಿ ಮಾಡಿಲ್ಲವೋ
ಒಂದು ಹುಡುಗಿಯನ್ನು ಸಹ ಕಣ್ಣೆತ್ತಿ ನೋಡಿಲ್ಲವೋ....
ಅಂತಹವರು ಈ ವಿಳಾಸಕ್ಕೆ ಭೇಟಿ ನೀಡಿ..
www.ಭೂಮಿಮೇಲೆಇನ್ನೂಯಾಕ್ ಬದ್ಕಿದೀಯಾ?ಎಲ್ಲಾದ್ರೂ ಹೋಗಿ ಸಾಯಿ.ಕಾಂ
10) ಇದನ್ನು ಕಳಿಸಿದವರು:- ಬಸು ಗುಳೇರ
ಅವಲಕ್ಕಿ
ಪುವಲಕ್ಕಿ
ಕಾಂಚಣ
ಮಿಣ-ಮಿಣ
ಡಾಂ
ಡೂಂ
ಡಸ್
ಬಸ್
ಕೊಯ್
ಕೊಟಾರ್
೧ ೨ ೩ ೪ ೫ ೬ ೭ ೮ ೯ ೧೦
ಏನ್ ಕಳಿಸಿದ್ರೂ ಓದ್ತೀರಲ್ರೀ..
ನಿಮ್ ಮನಸ್ಸು ತುಂಬಾ ದೊಡ್ಡದು.. ನೀವು ಆ ಥರಾ......
11) ಇದನ್ನು ಕಳಿಸಿದವರು:- ----
What is a Sentance?
A Sentance is a ಸುಂಟಿ ಪುಡಿ.. ಹೊಟ್ಟೆ ನೂವು ಬಂದಾಗ ಕಾಸ್ಕೊಂಡು ಕುಡಿ...
೧೨) ಇದನ್ನು ಕಳಿಸಿದವರು:- ನಿಂಗಾಚಾರಿ. ಚಿಕ್ಕನಾಯಕನಹಳ್ಳಿ
ಸರ್ದಾರ್:- ಏನಮ್ಮಾ, ನಿನ್ನ ಗಂಡ ಚನ್ನಾಗಿದಾನಾ??
ಅವಳು:- ಏನ್ ಸ್ವಾಮಿ, ಏಕವಚನದಲ್ಲಿ ಮಾತಾಡುಸ್ತೀರಲ್ಲಾ...
ಸರ್ದಾರ್:- ಓಹ್.. ಏನಮ್ಮಾ, ನಿನ್ನ ಗಂಡಂದ್ರು ಚನ್ನಾಗಿದಾರಾ??
೧೩) ಇದನ್ನು ಕಳಿಸಿದವರು:- ಯದು ಢಾಭಾ ಚಿಕ್ಕನಾಯಕನಹಳ್ಳಿ
ಅಪ್ಪಿಕೊಂಡರೂ
ಮುತ್ತು ಕೊಡದ ಅವಳಿಗಿಂತ....
ತುಟಿಗೆ ತುಟಿ ಇಟ್ಟು ಚುಂಬಿಸುವ
ಇವಳೇ ಗ್ರೇಟ್...
ಅದುವೇ ಸಿಗರೇಟ್........
೧೪) ಇದನ್ನು ಕಳಿಸಿದವರು:- ಸುಜಿತ್, ತುಮಕೂರು
ಭಿಕ್ಷುಕರಿಗೆ
ದುಡ್ಡು ಕೊಟ್ರೆ ಪುಣ್ಯ /ವಾಹ್..ವಾಹ್/
ಭಿಕ್ಷುಕರಿಗೆ
ದುಡ್ಡು ಕೊಟ್ರೆ ಪುಣ್ಯ....
Mosquito ಗೆ
ಬ್ಲಡ್ ಕೊಟ್ರೆ,
ಚಿಕನ್ ಗುನ್ಯಾ,,,, /ವಾಹ್ ವಾಹ್.../
೧೫) ಇದನ್ನು ಕಳಿಸಿದವರು:- ಈರಣ್ಣ ಯಳವತ್ತಿ
ಪೋಲೀಸ್ ಪೇದೆ:- ನೆನ್ನೆ ಜೈಲಿನಲ್ಲಿ ಕೈದಿಗಳು ರಾಮಾಯಣ ನಾಟಕ ಮಾಡಿದರು.
ಜೈಲರ್:- ಅದಕ್ಕೇನೀಗಾ???
ಪೋಲೀಸ್ ಪೇದೆ:- ನೆನ್ನೆ ಸಂಜೀವಿನಿ ತರಕೆ ಹೋದ ಹನುಮಂತ ಇನ್ನೂ ಬಂದಿಲ್ಲಾ..
೧೬) ಇದನ್ನು ಕಳಿಸಿದವರು:- -----
ನಿನ್ನ ಸುತ್ತಲೂ ಕತ್ತಲು ತುಂಬಿದ್ದರೆ,
ಕತ್ತಲನ್ನು ಹೋಗಲಾಡಿಸು ಎಂದು ದೇವರನ್ನು ಪ್ರಾರ್ಥಿಸು...
ಆಗಲೂ ಕತ್ತಲು ಹೋಗದಿದ್ದಲ್ಲಿ,
ಕರೆಂಟ್ ಬಿಲ್ ಕಟ್ಟಿ ಬಾ,,.
೧೭) ಕಳಿಸಿದವರು:- ನಾನೇ
ಅತಿಯಾಗಿ ದ್ವೇಷಿಸಬೇಕು
ನಾ ನಿನ್ನ...
ಅತಿಯಾಗಿ ದ್ವೇಷಿಸಬೇಕು
ನಾ ನಿನ್ನ
ಯಾಕೆಂದರೆ,
ಅತಿಯಾಗಿ ದ್ವೇಷಿಸುವವರನ್ನು ಮಾತ್ರ
ಅತಿಯಾಗಿ
ಪ್ರೀತಿಸಲು ಸಾಧ್ಯ...!!!
೧೮) ಇದನ್ನು ಕಳಿಸಿದವರು:- ಸುದರ್ಶನ್, ಶಿರಾ
ಹುಡುಗಿ:- ಈ ಅಡ್ರಸ್ ಎಲ್ಲಿ ಬರುತ್ತೆ ಅಂತಾ ಹೇಳ್ತೀರಾ...??
ಹುಡುಗ:- ಇಂಗೆ, Stright ಗಿ ಹೋಗಿ,
ಅಲ್ಲಿ 3 ರೋಡ್ ಸಿಗುತ್ತೆ, 3ನೇ ರೋಡಲ್ಲಿ ಹೋಗಿ
ಅಲ್ಲಿ 3 ಬಸ್ ನಿಂತಿರುತ್ತೆ
3ನೇ ಬಸ್ ಹತ್ತಿ, 3ನೇ ಸ್ಟಾಪಲ್ಲಿ ಇಳೀರಿ..
ಎದುರಿಗೆ 3 ಮನೆ ಕಾಣ್ಸುತ್ತೆ
3ನೇ ಮನೆಗೆ ಹೋಗಿ, ಅಲ್ಲಿ 3 ಮಹಡಿ ಇದೆ
3ನೇ ಮಹಡಿಗೆ ಹೋಗಿ,
ಅಲ್ಲಿ 3 ರೂಮ್ ಸಿಗುತ್ತೆ..
3ನೇ ರೂಮ್ ಗೆ ಹೋಗಿ, ಅಲ್ಲಿ
3 ಟೇಬಲ್ ಮೇಲೆ ೩ ಬುಕ್ ಇದೆ
3ನೇ ಬುಕ್ ನ 3ನೇ ಪೇಜಲ್ಲಿ
3 ಫೋಟೋ ಇದೆ.
ಆ 3ನೇ ಫೋಟೋ ನನ್ ತಾಯಿದು..
ಆ ಫೋಟೋ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ...
'ಈ ಅಡ್ರಸ್ ನಂಗೆ ಗೊತ್ತಿಲ್ಲಾ..'
೧೯) ಇದನ್ನು ಕಳಿಸಿದವರು:- ಮಮ್ಮಿ (ಮಂಜುಳಾ) ಹೊಸಕೋಟೆ/ದೊಡ್ಡನಲ್ಲೂರಳ್ಳಿ
ಲವ್ ಕ್ಲಿಕ್ ಆದ್ರೆ,
ಹುಡುಗ ಹುಡುಗಿ ದಿನಾ
PULSAR-DTS-i
ನಲ್ಲಿ ಊರ್ ತುಂಬಾ ರೌಂಡು....
ಹುಡುಗಿ ಕೈ ಕೊಟ್ರೆ...
ಹುಡುಗನ ಮನೆ ಮುಂದೆ
DTS ಎಫೆಕ್ಟ್ ನಲ್ಲಿ ತಮಟೆ ಸೌಂಡು.......
೨೦) ನಿಮಗೆ 99% ಬೇಜಾರ್ ಆದ್ರೆ,
16% ಕೋಪ ಇದ್ರೆ,
19% ಕಷ್ಟ ಇದ್ರೆ
02% ಸಂತೋಷ ಇದ್ರೆ,
27% ಭಯಾ ಇದ್ರೆ.....
ಈ ಎಲ್ಲಾ ನಂಬರ್ ಸೇರಿಸಿ ಇಂದು ಕಾಲ್ ಮಾಡಿ...
ಬೆಸ್ಟ್ ಫ್ರೆಂಡ್ ಸಿಗ್ತಾರೆ..
ಬೇಜಾನ್ ಮಾತಾಡಿ.....
ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪ್ರೇಯಸಿ ಎಂಬ ಗೆಳತಿಗೆ.. ಒಂದು ಪ್ರೇಮ ಪತ್ರ.
2014 ರ ಯಳವತ್ತಿ ಟ್ವೀಟುಗಳು
ಲೋಕಾಯುಕ್ತ ದಾಳಿಯ ನಂತರ ಮುಂದೇನು???
ಮಂಡೆ ಬಿಸಿ ಮಾರಾಯ್ರೆ !!!
ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)