ಮೂಢ ಉವಾಚ -40

 

ಕೆಡುಕಾಗುವ ಭಯ ಕೆಡುಕ ತಡೆದೀತು|
ರೋಗದ ಭಯ ಚಪಲತೆಯ ತಡೆದೀತು||
ಶಿಕ್ಷೆಯ ಭಯವದು ವ್ಯವಸ್ಥೆ ಉಳಿಸೀತು|
ಗುಣ ರಕ್ಷಕ ಭಯಕೆ ಜಯವಿರಲಿ ಮೂಢ||

ನರಕದ ಭಯ ಉಳಿಸೀತು ಸ್ವರ್ಗವ|
ಭಯವಿರೆ ಮಾನವ ಇಲ್ಲದಿರೆ ದಾನವ||
ಭಯದಿಂ ವ್ಯಷ್ಟಿ ಸಮಷ್ಟಿಗೆ ಕ್ಷೇಮಭಾವ|
ಲೋಕಹಿತ ಕಾರಕವು ಭಯವೆ ಮೂಢ||

*****************

 -ಕವಿನಾಗರಾಜ್.