ಮುಖವಾಡ
ಶ್ವೇತವಸನಧಾರಿಯ ಒಳಗು ಕಪ್ಪಿರಬಹುದು
ಹಂದರವಿದ್ದೀತು ಮನ ದೇಹ ಸುಂದರವಿದ್ದು |
ಕಾಣುವುದು ಒಂದು ಕಾಣದಿಹದಿನ್ನೊಂದು
ಮುಖವಾಡ ಧರಿಸಿಹರು ನರರು ಮೂಢ ||

                ಛಲ
ಗುರಿಯ ಅರಿವಿರಲು ಅಡಿಯಿಟ್ಟು ಮುಂದೆನಡೆ
ತಪ್ಪಿರಲು ತಿದ್ದಿ ನಡೆ ಒಪ್ಪಿರಲು ಸಾಗಿ ನಡೆ |
ಛಲಬಿಡದೆ ನಡೆ ಮುಂದೆ ಅಡೆತಡೆಯ ಲೆಕ್ಕಿಸದೆ
ಹಂಬಲದ ಹಕ್ಕಿಗೆ ಬೆಂಬಲವೆ ರೆಕ್ಕೆ ಮೂಢ ||
 

****************

-ಕ.ವೆಂ.ನಾಗರಾಜ್.