ಭಾಷಾ ಮಾಧ್ಯಮ, ಕನ್ನಡಿಗರಿಗೆ ಉದ್ಯೋಗ ಅವಕಾಶ, ಪ್ರಾದೇಶಿಕ ಅಸಮತೋಲನ ನಿವಾರಣೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡುವುದು, ರೈತರ ಸಮಸ್ಯೆಗಳ ನಿವಾರಣೆ, ಗಡಿ ಭಾಗದ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ, ಹೊಗೇನಕಲ್ - ಜಂಟಿ ಸಮೀಕ್ಷೆಗೆ ಒತ್ತಾಯಿಸುವುದು ಮತ್ತು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಆದ್ಯತೆ ಮತ್ತು ಕನ್ನಡಿಗರಿಗೆ ಕೆಲಸ ನೀಡುವುದು. ಈ ಎಲ್ಲ ವಿಷಯಗಳ ಬಗ್ಗೆ ಸರ್ಕಾರ ಗಮನ ಹರಿಸುವಂತೆ ಆಗ್ರಹಿಸಿ ಜುಲೈ 7 ರಂದು ದೊಡ್ಡ ಜಾಥಾವನ್ನು ನಾವು (ಕ.ರ.ವೇ.) ಹಮ್ಮಿಕೊಂಡಿದ್ದೆವು. ಜಾಥಾದ ನಂತರ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ನವರಿಗೆ ಮನವಿ ಪತ್ರವನ್ನು ನೀಡಿದೆವು.

ಜಾಥಾದ ಬಗ್ಗೆ ಮತ್ತು ಮನವಿ ಪತ್ರವನ್ನು ಓದಲು ಇಲ್ಲಿ ನೋಡಿ

http://karave.blogspot.com