ಮತ್ಸರ
ಸದ್ಗುಣಕಮಲಗಳು ಕಮರಿ ಕಪ್ಪಡರುವುದು
ಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|
ಅರಿವು ಬರುವ ಮುನ್ನಾವರಿಸಿ ಮತ್ಸರವು
ನರರ ಕೀಳರಾಗಿಸದೆ ಮೂಢ||

 

ನೋಡುವ ನೋಟವದು ಭಿನ್ನವಾಗುವುದು
ಅತ್ತೆ ಸೊಸೆಯರ ನಡುವೆ ಹೆತ್ತವರ ನಡುವೆ|
ದ್ವೇಷ ಭುಗಿಲೇಳುವುದು ಸೋದರರ ನಡುವೆ
ಕಾಳ ಮತ್ಸರದ ಚೇಳು ಕುಟುಕೀತು ಮೂಢ||
 

**********************

-ಕ.ವೆಂ.ನಾಗರಾಜ್.