ನೀಡಿದುದು ನೆನಪಿನಲಿರುವುದು ಸ್ವಾರ್ಥ ತುಂಬಿದ ಮನಕೆ

ಪಡೆದುದ ಶೀಘ್ರದಲಿ ಮರೆವ ಗುಣವೆ ತುಂಬಿಹುದು ಅದಕೆ

ಪರರ ದುಃಖಗಳಿಗೆ ಮರುಗದು ಸ್ವಾರ್ಥ ತುಂಬಿದ ಮನವು

ಬೇಕಿಹುದನು ಬಿಡದೆ ಪಡೆಯಲೆತ್ನಿಸುವುದೆ ಅದರ ಗುಣವು

 

ನೀನೊಬ್ಬನೆ ಜಗದೊಳಿದ್ದು  ಬಾಳಲು ಸಾಧ್ಯವಾಗುವುದೇನು

ಎಲ್ಲರೊಡನೆ ಹೊಂದಿಕೆಯಿಂದಲಿ ಬಾಳಬೇಕಿ ಜಗದಿ ನೀನು

ಸ್ವಾರ್ಥಿಯಾದೊಡೆ ಒಂಟಿಯಾಗಿರಬೇಕಿಹುದು ನೀ ಜಗದಲಿ

ಸ್ವಾರ್ಥವ  ತೊರೆದು ತೃಪ್ತಿಯಲಿರಲಾಗ ನೆಮ್ಮದಿ ಬಾಳಿನಲಿ

 

ಸ್ವಾರ್ಥವ ತೊರೆದು ಪರರೊಳಗೆ ನಿಂತು ಅವರಂತೆ ನೀ ನೋಡು

ಮೆಚ್ಚುವನು ಶ್ರೀ ನರಸಿಂಹ ಪರಹಿತ ಬಯಸಿ ಕರ್ಮಗಳ ಮಾಡು