ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಶ್ರೀ ನರಸಿಂಹ

ಶ್ರೀ ನರಸಿಂಹ

೩೨ ಲೇಖನಗಳು

ಕಂಡು ಕಾಣದಂತಿಹನು (ಶ್ರೀ ನರಸಿಂಹ 83)

ಸತೀಶ ಎನ್ ಮಾರ್ಚ್ ೩೦ ಬ್ಲಾಗ್ ೮೬ ವೀಕ್ಷಣೆಗಳು

ಸಕ್ಕರೆಯ ಕಣಗಳ ಕರಗಿಸಿಟ್ಟಿಹ ನೀರ ನೋಡಲು ನೀನು ಕರಗಿರುವ ಸಕ್ಕರೆಯೂ ನಿನ್ನ ಕಣ್ಣುಗಳಿಗೆ ಕಾಣುವುದೇನು ಕಾಣದದು ಎಂದು ಅದರಿರುವನೆ ನೀ ಸುಳ್ಳೆನ್ನಲಾಗುವುದೆ ರುಚಿಯ ನೋಡಲದರಿರುವು ನಿನ್ನನುಭವಕೆ ಬಾರದಿಹುದೆ   ಪರಮಾತ...

ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)

ಸತೀಶ ಎನ್ ಮಾರ್ಚ್ ೨೨ ಬ್ಲಾಗ್ ೧೦೪ ವೀಕ್ಷಣೆಗಳು

ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು   ಏಕ...

ಸ್ವಾರ್ಥದ ಗುಣ (ಶ್ರೀ ನರಸಿಂಹ 81)

ಸತೀಶ ಎನ್ ಮಾರ್ಚ್ ೧೫ ಬ್ಲಾಗ್ ೮೪ ವೀಕ್ಷಣೆಗಳು

ನೀಡಿದುದು ನೆನಪಿನಲಿರುವುದು ಸ್ವಾರ್ಥ ತುಂಬಿದ ಮನಕೆ ಪಡೆದುದ ಶೀಘ್ರದಲಿ ಮರೆವ ಗುಣವೆ ತುಂಬಿಹುದು ಅದಕೆ ಪರರ ದುಃಖಗಳಿಗೆ ಮರುಗದು ಸ್ವಾರ್ಥ ತುಂಬಿದ ಮನವು ಬೇಕಿಹುದನು ಬಿಡದೆ ಪಡೆಯಲೆತ್ನಿಸುವುದೆ ಅದರ ಗುಣವು   ನೀನ...

ದ್ವಂದ್ವ (ಶ್ರೀ ನರಸಿಂಹ 80)

ಸತೀಶ ಎನ್ ಫೆಬ್ರ ೨೨ ಬ್ಲಾಗ್ ೮೦ ವೀಕ್ಷಣೆಗಳು

ವಿಷಯಾಸಕ್ತಿಯಲಿ ಮುಳುಗಿ ಮನ ತೊಳಲಾಡುತಿಹುದು ಕರ್ಮ, ಬಂಧಗಳೆನುವ ಬಲೆಯೊಳು ತಾನೆ ಸಿಲುಕಿಹುದು ತ್ಯಜಿಸಬೇಕೆಲ್ಲವ  ಎಂದೊಮ್ಮೊಮ್ಮೆ   ಮನಸಿಗನಿಸಿದರು ಸೋಲುವುದು ಮನ ಭೋಗ, ಲಾಲಸೆ ಮಾಯೆಯೆದುರು   ಇರಿಸಿಹನು ಎಲ್ಲವನು,...

ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)

ಸತೀಶ ಎನ್ ಜನ ೨೫ ಬ್ಲಾಗ್ ೧೦೫ ವೀಕ್ಷಣೆಗಳು

ಕೋಪವೆಂಬುವುದದು ಬರುವುದು ಸಹಜ ಮನಸಿನಲಿ ನಾಲಿಗೆಯೂ ಕೋಪದೊಂದಿಗೆಂದೆಂದು  ಸೇರದಿರಲಿ ಬುದ್ದಿ ನಾಶವು ಕೋಪದೊಂದಿಗೆ ಸೇರೆ ನಾಲಿಗೆಯೂ ಕೋಪವೆಂಬುದನು ನೀ ನಿಗ್ರಹಿಸಲದು ಸಾಧನೆಯೂ   ತಾಳ್ಮೆಯಿರದ ಮನ ಕೋಪವೆಂಬುದರ ವಾಸದ...

ಮನಸಿನಂತೆ ನಡೆಯದಿರು (ಶ್ರೀ ನರಸಿಂಹ 78)

ಸತೀಶ ಎನ್ ಜನ ೧೮ ಬ್ಲಾಗ್ ೧೦೪ ವೀಕ್ಷಣೆಗಳು

ಮನಸು ತಾ ಬಯಸಿದ ತೆರದಿ ನಿನ್ನ ಕುಣಿಸುತಿಹುದು ಜಗದಲೆಲ್ಲ ತನ್ನಂತೆ ನಡೆಯಬೇಕೆಂದು ಬಯಸಿಹುದು ಸುಖವಿಹುದೆನುತ ನಿನ್ನ ಹೊರಗಲೆಸುತಿಹುದಿ ಮನಸು ಅದ ನಂಬಿ ನೀ ಕಾಣುತಿಹೆ ಸುಖ,ನೆಮ್ಮದಿಯ ಕನಸು   ಮನಸು ಬಯಸಿದ ತೆರದಿ ನಡ...

ಸತ್ಯ-ಮಿಥ್ಯ (ಶ್ರೀ ನರಸಿಂಹ 77)

ಸತೀಶ ಎನ್ ಜನ ೧೧ ಬ್ಲಾಗ್ ೯೯ ವೀಕ್ಷಣೆಗಳು

ಕಣ್ಣೆಗೆ  ಕಾಣುತಿಹ ನೋಟವದು ಸತ್ಯವೆಂದೆನಿಸುವುದು ಒಳಹೊಕ್ಕು ನೋಡಲದೊಮ್ಮೊಮ್ಮೆ ಮಿಥ್ಯವಾಗಿಹುದು ದೂರದಲಿ ನಿಂತು ನೋಡಲು ಸುಂದರವು ನದಿ ಹರಿವು ಕಾಣಿಸದು ಕಣ್ಣಿಗೆ ನದಿಯೊಳಗಿರುವ ಸುಳಿಯ ಇರುವು   ಹೊರ ನಡೆ, ನುಡಿ ನೋ...

ಒಳಿತು-ಕೆಡುಕಿನ ಯೋಚನೆ (ಶ್ರೀ ನರಸಿಂಹ 76)

ಸತೀಶ ಎನ್ ಜನ ೦೪ ಬ್ಲಾಗ್ ೭೪ ವೀಕ್ಷಣೆಗಳು

ಎಲ್ಲ ಯೋಚನೆಗಳು ಎಲ್ಲರಲಿ ಬಂದು ಹೋಗುವುದು ಬರುವ ಸಮಯವದು ಮಾತ್ರವೆ  ಬದಲು ಆಗುವುದು ಸಾಗರದಲಿ  ರೌದ್ರ, ಶಾಂತತೆಯ ಅಲೆಗಳಿರುವಂತೆ ಮನದೊಳೇಳುವ ಕೆಟ್ಟ,ಒಳ್ಳೆಯ ಯೋಚನೆಗಳಂತೆ   ಮನದಿ ಬರುವ ಯೋಚನೆಗಳಂತೆ ನೀ ನಡೆಯದಿರು...

ವೈರಾಗ್ಯ (ಶ್ರೀ ನರಸಿಂಹ-75)

ಸತೀಶ ಎನ್ ಡಿಸೆಂ ೨೮ ಬ್ಲಾಗ್ ೧೨೪ ವೀಕ್ಷಣೆಗಳು

ಸಾವ  ಕಂಡಾಗಲಷ್ಟೆ ಏಳುವುದೆಮ್ಮ ಮನದಿ ವೈರಾಗ್ಯ ಮರು ಕ್ಷಣವೆ ಮರೆತದ ಬಯಸುವೆವು  ಭೋಗ, ಭಾಗ್ಯ ಮನಕಿದ್ದರೂ ಶಾಶ್ವತವಲ್ಲ  ಜಗದಲೆಲ್ಲವೆಂಬುದರರಿವು ಮಾಯೆಗೊಳಗಾಗಿ ಪಡೆಯಲಿಚ್ಚಿಪುದೆಲ್ಲವನು ಮನವು   ಹಣ,ಹೆಣ್ಣಿನಿಂದಲೇ...

ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)

ಸತೀಶ ಎನ್ ಡಿಸೆಂ ೨೧ ಬ್ಲಾಗ್ ೯೦ ವೀಕ್ಷಣೆಗಳು

ಕರ್ಮಗಳೆಂಬ  ಬಲೆಯ  ಹರಡಿಹನು  ದೇವ ಜಗದೊಳಗೆ ಕರ್ಮದೊಳು ಸಿಲುಕಿಸುವನೆಲ್ಲರನಿರಿಸಿ ಮಾಯೆಯೊಳಗೆ ಉಸುಕಿನೊಳು ಸಿಲುಕಿ ಮಿಸುಕಾಡಲದು ಒಳ ಸೆಳವಂತೆ ಬಿಡಿಸಿಕೊಳ್ಳಲೆತ್ನಿಸೆ ಬಿಗಿವುದು ನಿನ್ನ ಕರ್ಮಬಂಧಗಳಂತೆ   ಕರ್ಮಗಳು...

ಬಾಳಿನ ಏಳು ಬೀಳು (ಶ್ರೀ ನರಸಿಂಹ 73)

ಸತೀಶ ಎನ್ ಡಿಸೆಂ ೧೪ ಬ್ಲಾಗ್ ೮೫ ವೀಕ್ಷಣೆಗಳು

ಉಂಡು ಎಸೆದ ಎಲೆಯಂತೆ ನಡೆಯುತಿಹುದೆಮ್ಮ ಬಾಳು ಮೇಲೊಮ್ಮೆ, ಕೆಳಗೊಮ್ಮೆ  ಅಂತೆಮ್ಮ ಬಾಳ ಏಳು ಬೀಳು ಗಾಳಿಯಿಂದಲೆಲೆ ಉಪ್ಪರಿಗೆಯಲೊಮ್ಮೆ,, ತಿಪ್ಪೆಯಲೊಮ್ಮೆ ವಿಧಿಯ ಆಟದಿಂದಲೆಮ್ಮ ಬಾಳು ಮೇಲೊಮ್ಮೆ,,ಕೆಳಗೊಮ್ಮೆ   ನಡೆಯು...

ಮನದ ಬಯಕೆಗಳು (ಶ್ರೀ ನರಸಿಂಹ 72)

ಸತೀಶ ಎನ್ ಡಿಸೆಂ ೦೭ ಬ್ಲಾಗ್ ೬೧ ವೀಕ್ಷಣೆಗಳು

ಸಹಜ ಮೆಚ್ಚಿದುದನ್ನೆಲ್ಲ ಮನಸು  ಪಡೆಯಲಿಚ್ಚಿಸುವುದು ಅರ್ಹನಿಹೆನೆನದಕೆಂಬುದ ನೀ ಮೊದಲರಿಯಬೇಕಿಹುದು ಪಡೆಯ ಬಯಸದಿರು  ನೀ ಮೆಚ್ಚಿದುದ  ಒತ್ತಾಯದಿಂದ ಪಡೆದರೂ ನಿನದನು ನೆಮ್ಮದಿಯು  ದೊರಕದದರಿಂದ   ಸದ್ವಿಚಾರ,ಸದ್ಬಯಕೆ...

ಜಗದಿರುವಿಕೆ (ಶ್ರೀ ನರಸಿಂಹ 71)

ಸತೀಶ ಎನ್ ಅಕ್ಟೋ ೦೫ ಬ್ಲಾಗ್ ೭೦ ವೀಕ್ಷಣೆಗಳು

ಅಜ್ಞಾನವೆಂಬುವ ಸುಲೋಚನವ ನೀ  ಕಣ್ಣಿಗೆ  ಧರಿಸಿ ಜಗವ ನೋಡುತಲಿ  ಕಾಣ್ವುದನೆ ನಿಜವೆಂದು ಭ್ರಮಿಸಿ ಸರಿಯಿಲ್ಲವೀ ಜಗದೊಳಾವುದು ಎನುತ ಗೊಣಗದಿರು ನಡೆಯುತಿಹುದೆಲ್ಲವ ನೋಡಿ ನೊಂದು  ಮರುಗದಿರು   ತನ್ನಿಚ್ಚೆಯೆಂತೆ ನಡೆಸಿ...

ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)

ಸತೀಶ ಎನ್ ಸೆಪ್ಟೆಂ ೨೮ ಬ್ಲಾಗ್ ೮೦ ವೀಕ್ಷಣೆಗಳು

ತಲೆಯನೆತ್ತಿ  ನೋಡು  ಇರುಳಲೊಮ್ಮೆ ನೀ ಆಗಸವನು ಕಾಣ್ವ ಗ್ರಹ,ತಾರೆಗಳ ನೋಟ ಕಾಡುವುದೆಮ್ಮ ಚಿತ್ತವನು  ಕೋಟ್ಯಾನುಕೋಟಿ ಸೃಷ್ಠಿಗಳಿರುತಿಹ  ಈ  ಬ್ರಹ್ಮಾಂಡಕೆ  ಸಣ್ಣ  ಕಣದೊಳಗೊಂದು  ಸಣ್ಣ  ಕಣದಂತಿಲ್ಲೆಮ್ಮಿರುವಿಕೆ  ...

ಮೇಲು-ಕೀಳು (ಶ್ರೀ ನರಸಿಂಹ 69)

ಸತೀಶ ಎನ್ ಸೆಪ್ಟೆಂ ೨೧ ಬ್ಲಾಗ್ ೭೫ ವೀಕ್ಷಣೆಗಳು

ಶೂದ್ರ, ವೈಶ್ಯ ,ಕ್ಷತ್ರಿಯ, ಬ್ರಾಹ್ಮಣ ಎನುವ ವಿಂಗಡಣೆಯು ಹುಟ್ಟಿನಿಂದಲೀ ವಿಂಗಡಣೆ ಬರುವುದೆಂಬುವುದು ಭ್ರಮೆಯು ಗುಣ, ಸ್ವಭಾವ,ಕರ್ಮಗಳಿಗನುಸಾರ ಪರಿಗಣಿಸಬೇಕಿವನು ಮನಸಿನಿಂದಲಿ ನೀ ಹೊರಹಾಕು ಮೇಲು,ಕೀಳೆಂಬುದನು   ತಾ...

ಮನಸು-ಕನ್ನಡಿ(ಶ್ರೀ ನರಸಿಂಹ 68)

ಸತೀಶ ಎನ್ ಸೆಪ್ಟೆಂ ೧೪ ಬ್ಲಾಗ್ ೭೯ ವೀಕ್ಷಣೆಗಳು

ನೀರು, ಕನ್ನಡಿಯೊಳು ಕಾಣುವ ಚಂದ್ರ ಬಿಂಬವದು ನೀರು, ಕನ್ನಡಿಗಳ  ಸ್ವಚ್ಚತೆಯನದವಲಂಬಿಸಿಹುದು ಕೊಳೆಯಿಂದ ನೀರು,ಕನ್ನಡಿ ಬಿಂಬ ಮಂಕಾದರೇನು  ಮೂಲ ಚಂದ್ರನ  ಬಿಂಬವದು ಕಳೆಗುಂದುವುದೇನು   ಆತ್ಮ ಪರಮಾತ್ಮನ ಬಿಂಬದಂತೆಲ್ಲ...

ನಿನ್ನಂತೆ ಜಗವಿಲ್ಲ (ಶ್ರೀ ನರಸಿಂಹ 67)

ಸತೀಶ ಎನ್ ಮಾರ್ಚ್ ೧೧ ಬ್ಲಾಗ್ ೮೮ ವೀಕ್ಷಣೆಗಳು

ಬಯಸದಿರು ಪರರಿಂದ ಏನೊಂದನು ನೀ ಜೀವನದಲಿ ಬಯಸಿದುದು ಸಿಗದಿರೆ ಕುಗ್ಗುವುದು ಮನ ನೋವಿನಲಿ ಸತಿಯೂ,ಸಖರು,ಬಂದು,ಮಕ್ಕಳೆಂದೆನುವ ನಿನ್ನವರು ಕೂಡಿ ಬಾಳಿದರು,  ನಿನ್ನಿಚ್ಚೆಯಂತೆ  ಅವರಾರು ಇರರು .. ಜಗವೆಲ್ಲ  ನನ್ನಂತೆ ನಡ...

ಪಾಪ,ಪುಣ್ಯದ ಫಲ (ಶ್ರೀ ನರಸಿಂಹ 66)

ಸತೀಶ ಎನ್ ಮಾರ್ಚ್ ೦೫ ಬ್ಲಾಗ್ ೮೨ ವೀಕ್ಷಣೆಗಳು

ಪುಣ್ಯದ ಕರ್ಮಗಳನಾರು  ಮಾಡಲಿಚ್ಚಿಸರು ಅದರ ಫಲಗಳನು ಮಾತ್ರವೆ ಬಯಸುವರು ಪಾಪ ಕರ್ಮಗಳಲೆ ಮನಸು ಮುಳುಗಿಹುದು ಅದರ ಫಲಗಳ ಮಾತ್ರ ಪಡೆಯಲಿಚ್ಚಿಸದದು   ಭಾರ ಹೊತ್ತಿಹ ಬೆನ್ನು ನೇರವಾಗಿ ನಿಲದೆಂದು ಪಾಪ ಕರ್ಮಗಳ ಜೀವನದಿ...

ಧನದ ದಾಹ (ಶ್ರೀ ನರಸಿಂಹ 65)

ಸತೀಶ ಎನ್ ಫೆಬ್ರ ೨೫ ಬ್ಲಾಗ್ ೭೭ ವೀಕ್ಷಣೆಗಳು

ಹಣದಿಂದಲೆಲ್ಲ ಸುಖವನು ಪಡೆವೆವೆಂದೆನುತಲಿ ಗಳಿಸಲದನು  ಸುಲಭ  ಮಾರ್ಗವ ಹುಡುಕುತಲಿ ನೆಮ್ಮದಿಯು  ಸಿಗದೆ ಎಮ್ಮ ಮನ ಅಲೆದಿಹುದು ಕಾಂಚಾಣದಾಸೆಯಲದು ಗುರಿಯ ಮರೆತಿಹುದು   ಕೂಡಿಡದಿರು ಬೇಕಿಹುದಕಿಂತ ಮೀರಿ ನೀ ವಿತ್ತವನು...

ಸತ್ಯದ ಹಾದಿ (ಶ್ರೀ ನರಸಿಂಹ 64)

ಸತೀಶ ಎನ್ ಫೆಬ್ರ ೧೯ ಬ್ಲಾಗ್ ೭೧ ವೀಕ್ಷಣೆಗಳು

ಮೋಸಮಾಡುತಿಹ ಜನರು ಸಮೃದ್ದಿಯಲಿಹರಿಂದು ಸಂಭ್ರಮಿಸುತಲಿಹರು ಕುಹಕಗಳನಾಡುವವರಿಂದು ಮೆರೆದಿಹರು ವಾಮ ಮಾರ್ಗದಿ ಗಳಿಸುವವರಿಂದು ಪಾಪದ ಭೀತಿ ಮರೆಯಾಗಿಹುದು ಎಲ್ಲರಲಿ ಇಂದು   ದಂತ ಫಂಕ್ತಿಯ ನಡುವೆ ಇರುವ ಜಿಹ್ವೆಯ ತೆರದಿ...