ಬಯಸದಿರು ಪರರಿಂದ ಏನೊಂದನು ನೀ ಜೀವನದಲಿ

ಬಯಸಿದುದು ಸಿಗದಿರೆ ಕುಗ್ಗುವುದು ಮನ ನೋವಿನಲಿ

ಸತಿಯೂ,ಸಖರು,ಬಂದು,ಮಕ್ಕಳೆಂದೆನುವ ನಿನ್ನವರು

ಕೂಡಿ ಬಾಳಿದರು,  ನಿನ್ನಿಚ್ಚೆಯಂತೆ  ಅವರಾರು ಇರರು ..

ಜಗವೆಲ್ಲ  ನನ್ನಂತೆ ನಡೆಯಬೇಕೆನುವ  ಹಂಬಲವೇಕೆ

ನಿನ್ನಂತೆ  ಪರರು ಬಯಸುವರೆನುವುದ ತಿಳಿದಿಲ್ಲವೇಕೆ

ಪರ ಮನದ ಭಾವನೆಗಳನು ನೀ ಮೊದಲರಿಯಬೇಕು

ಮಾತನಾಡುವ ಮುನ್ನ ಜಿಹ್ವೆಯ ಹಿಡಿತದಲಿರಿಸಬೇಕು..

ಬಿಟ್ಟು ಹೋಗಬೇಕೆಲ್ಲವನು,ಎಲ್ಲರನು ಕೊಟ್ಟಿರುವ ಈ  ಜಗಕೆ

ನಡೆವುದೆಲ್ಲ ಶ್ರೀ ನರಸಿಂಹನಿಚ್ಚೆಯೆಂಬುದರಿವಾಗಲಿ ಮನಕೆ