ಅಜ್ಞಾನವೆಂಬುವ ಸುಲೋಚನವ ನೀ ಕಣ್ಣಿಗೆ ಧರಿಸಿ
ಜಗವ ನೋಡುತಲಿ ಕಾಣ್ವುದನೆ ನಿಜವೆಂದು ಭ್ರಮಿಸಿ
ಸರಿಯಿಲ್ಲವೀ ಜಗದೊಳಾವುದು ಎನುತ ಗೊಣಗದಿರು
ನಡೆಯುತಿಹುದೆಲ್ಲವ ನೋಡಿ ನೊಂದು ಮರುಗದಿರು
ತನ್ನಿಚ್ಚೆಯೆಂತೆ ನಡೆಸಿಹುದೊಂದು ಶಕ್ತಿ ಈ ಜಗವನೆಲ್ಲ
ವಿವಿಧ ಹೆಸರುಗಳ ನೀಡಿ ಆ ಶಕ್ತಿಯನೆ ನಮಿಸುವೆವೆಲ್ಲ
ವೀಕ್ಷಿಪನು ನಾಟಕದ ತೆರದಿ ಜ್ಞಾನಿಯಾದವ ಈ ಜಗವ
ಮನಸಿನಜ್ಞಾನ ಕಳೆಯಲು ಪಡೆ ನೀನು ಶ್ರೀಹರಿ ಒಲವ
ಹಿಂದಿನಿಂದಲೂ, ಮುಂದೆಯೂ ಈಗಿನಂತೆ ನಡೆದಿಹುದೀ ಜಗವು
ಕಳೆವುದೆಲ್ಲ ಕ್ಲೇಷಗಳನು ಜಗದೊಡೆಯ ಶ್ರೀನರಸಿಂಹನ ಜಪವು
ಪ್ರತಿಕ್ರಿಯೆ (1)