ಹಣದಿಂದಲೆಲ್ಲ ಸುಖವನು ಪಡೆವೆವೆಂದೆನುತಲಿ
ಗಳಿಸಲದನು ಸುಲಭ ಮಾರ್ಗವ ಹುಡುಕುತಲಿ
ನೆಮ್ಮದಿಯು ಸಿಗದೆ ಎಮ್ಮ ಮನ ಅಲೆದಿಹುದು
ಕಾಂಚಾಣದಾಸೆಯಲದು ಗುರಿಯ ಮರೆತಿಹುದು
ಕೂಡಿಡದಿರು ಬೇಕಿಹುದಕಿಂತ ಮೀರಿ ನೀ ವಿತ್ತವನು
ಬೇಕಿರುವವರಿಹರೀ ಜಗದಿ ನೀ ನೀಡು ಅಧಿಕವನು
ಕೂಡಿಡ ತೊಡಗೆ ಧನವನು ತೃಪ್ತಿಯೆಂಬುವುದಿರದು
ಅಧಿಕವಾಗದನು ನೀ ಕೂಡಿಡೆ ನೆಮ್ಮದಿಯೂ ಸಿಗದು
ಧನವೆಂಬುದದು ಅಧಿಕದಲಿ ಸೇರೆ ಕಾಯಬೇಕಿಹುದು ನೀ ಅದನು
ನಂಬು ಶ್ರೀನರಸಿಂಹನ,ಒದಗಿಸುವ ಸರಿಕಾಲಕೆ ಬೇಕಿಹ ಧನವನು
ಪ್ರತಿಕ್ರಿಯೆ (4)