ಕರ್ಮಗಳೆಂಬ  ಬಲೆಯ  ಹರಡಿಹನು  ದೇವ ಜಗದೊಳಗೆ

ಕರ್ಮದೊಳು ಸಿಲುಕಿಸುವನೆಲ್ಲರನಿರಿಸಿ ಮಾಯೆಯೊಳಗೆ

ಉಸುಕಿನೊಳು ಸಿಲುಕಿ ಮಿಸುಕಾಡಲದು ಒಳ ಸೆಳವಂತೆ

ಬಿಡಿಸಿಕೊಳ್ಳಲೆತ್ನಿಸೆ ಬಿಗಿವುದು ನಿನ್ನ ಕರ್ಮಬಂಧಗಳಂತೆ

 

ಕರ್ಮಗಳು ತನ್ನವೆಂದು ತಿಳಿದರವು ಬಂಧ ಎನಿಸುವುದು

ಫಲದಪೇಕ್ಷೆಯ ನೀ ಬಿಡಲು  ಕರ್ಮ ಬಂಧವೆಂಬುದಿರದು

ಕರ್ಮಗಳಾವುದಾದರೂ ಇರಲಿ, ಬರಲಿ ಬಾಳಿನ ಪಥದಲ್ಲಿ

ಎಲ್ಲ ಕರ್ಮಗಳು ದೈವಾಜ್ಞೆ ಎಂಬುದರರಿವಿರಲಿ ಮನದಲ್ಲಿ

 

ಕೆಸರಿನೊಳು ಉದ್ಬವಿಪ ಕಮಲಕೆಂದಿಗೂ ಕೆಸರು ಸೋಂಕದಂತೆ

ನಂಬಿದರೆ ನೀ ಶ್ರೀ ನರಸಿಂಹನನು ಕರ್ಮ ಬಂಧಗಳು ಇರದಂತೆ