ಹೊಸ-ಸರ್ಕಾರ ಬರುತ್ತೆ. ಇನ್ನೊಂದು- ಹಳೆಯದು, ಹೋಗಲೇಬೇಕಲ್ಲ. ಮುಂದಿನ ೫ ವರ್ಷಗಳ ನಡವಳಿಕೆಯಿಂದ ಮತ್ತೆ ಜನ ಬೇಸತ್ತರೆ, ಮತ್ತೊಂದು ಸುಮಾರಾಗಿ ಜನರು ನಂಬಿದ ಸರ್ಕಾರ ಬರುತ್ತೆ. ಇದು ವೃತ್ತಾಕಾರವಾಗಿ ಪ್ರವಹಿಸುತ್ತಿರುವ ನಮ್ಮ ಡೆಮೋಕ್ರೇಝಿಯ ವ್ಯವಸ್ಥೆ. ಯೇಕೆ ಕ್ರೇಝಿ ಎಂದರೆ, ಇದರಲ್ಲೂ ಹಲವಾರು, ತಲ್ಲಣಗಳನ್ನು ಆಳುವ ಸರ್ಕಾರ ಹಾಗೂ ಪ್ರಜೆಗಳು ಖಡ್ಡಾಯವಾಗಿ ೫ ವರ್ಷ ಅನುಭವಿಸಲೇ ಬೇಕು.
ನಮ್ಮ ಶಕ್ತಿಯೇನು. ಹಾಗೂ ಕೇಂದ್ರಸರ್ಕಾರದ ಜೊತೆ ಹೇಗೆ ವರ್ತಿಸಿ ಅನಗೆ ಬೇಕಾದ ಹಣದ ಪೂರೈಕೆಗಳನ್ನು ಪಡೆಯಬೇಕು. ಇತ್ಯಾದಿಗಳನ್ನು ಸರಿಯಾಗಿ ಗಮನಿಸಬೇಕು. ಮುಖ್ಯಮಂತ್ರಿಗಳಿಗೆ, ಮನೆಯಲ್ಲಿ ಹೋಂ ವರ್ಕ್ ಅಗತ್ಯ ಹೆಚ್ಚು. ಅದಲ್ಲದೆ ಇನ್ನೂ ಹೊಸ, ಯುವ ಶಕ್ತಿಗಳನ್ನು ಮುಂದಿನ ಭವಿಷ್ಯಕ್ಕೆ ಸಿದ್ಧಪಡಿಸಬೇಕಾದದ್ದು ಇನ್ನೊಂದು ಅನಿವಾರ್ಯತೆ ಇದೆ.
ಮಾತಿನಲ್ಲಿ ಹಿಡಿತ, ಅತಿಹೆಚ್ಚು ಆಶ್ವಾಸನೆಗಳನ್ನು ಮಾಡದೆ, ಹಿತ-ಮಿತವಾದ, ಆರೋಗ್ಯಕರವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವುದು ಒಳ್ಳೆಯದು. ಅತಿ ವಿವಾದಗಳಿಗೆ ಪುಷ್ಟಿಕೊಡದೆ, ಜನಹಿತಕಾರ್ಯಗಳನ್ನು ಬಿಡದೆ ಮಾಡಿದರೆ, ಪ್ರಜೆಗಳು ಮತ್ತಿ ತಮ್ಮ ಓಟನ್ನು ಕೊಡಲು ಮುಂದೆಬರುತ್ತಾರೆ.
ಈಗ ನಮಗೆ ಬೇಕಾಗಿರುವುದು ಒಂದು ಸ್ಥಿರಸರ್ಕಾರ. ಪ್ರಾಮಾಣಿಕವಾಗಿ ನಡೆದಾಗ, ಹಲವು ತಪ್ಪುಗಳು ಆಗುತ್ತವೆ. ಆಗಲಿ. ಪರವಾಗಿಲ್ಲ. ಸಂಬಂಧಪಟ್ಟ ಮಂತ್ರಿಗಳು, ಕೇಂದ್ರದ ಸಹಕಾರವನ್ನು ಪಡೆದೇ ತಮ್ಮ ಹೇಳಿಕೆಗಳನ್ನು ಕೊಡುವುದು ಸೂಕ್ತ. ರೈತರಿಗೆ ಸಾಲ ಮನ್ನಾ. ಕಡಿಮೆ ಬೆಲೆಯಲ್ಲಿ ಪಡಿತರ ವಿತರಣೆ, ಪೆಟ್ರೋಲಿಯಂ ಬೆಲೆ ಇಳಿಸುತ್ತೇವೆ. ಯಾವಸರ್ಕಾರ ಬಂದರೂ ಅಂತಾರಾಷ್ಟ್ರೀಯ ಬೆಲೆನಿರ್ಧಾರದ ಮೇಲೆ ನಿಂತಿರುವ ಪೆಟ್ರೋಲಿಯಂ ಬೆಲೆಯನ್ನು ಯಾವ ಬ್ರಹ್ಮನಿಗೂ ನಿಯಂತ್ರಿಸಲು ಸಾಧ್ಯವಿಲ್ಲ. ಇದು ನಮಗೂ ಗೊತ್ತು. ಇವೆಲ್ಲಾ ಕೆಲಸಕ್ಕೆ ಬಾರದ ಹೇಳಿಕೆಗಳು.
ರೈತರಿಗೆ ಸವಲತ್ತುಗಳನ್ನು ಒದಗಿಸಿ. ಮನ್ನಾಮಾಡಬೇಡಿ. ಕುಡಿಯುವ ನೀರಿನ ಸಮಸ್ಯೆಯನ್ನು ತೀವ್ರವಾಗಿ ಗಮನಿಸಿ. ಈಗಾಗಲೆ ಜಾರಿಯಲ್ಲಿರುವ ಯೋಜನೆಗಳನ್ನು ಕೈಗೆ ತೆಗೆದುಕೊಂಡು ಮುಗಿಸಲು ಯತ್ನಿಸಿ. ಪ್ರಾಮಾಣಿಕ ಪ್ರಯತ್ನವನ್ನು ಜನ ಮೆಚ್ಚುತ್ತಾರೆ.
ದೇಶದ ಹಿತರಕ್ಷಗೆ ಪಣತೊಡಿ. ಸ್ಪಸ್ಟವಾಗಿ ಮಾತಾಡಿ. ಮಾತಾಡಿದ್ದನ್ನು ಕಾರ್ಯರೂಪಕ್ಕೆ ತನ್ನಿ. ಎಲ್ಲರಿಗೂ ಮಾದರಿಯಾಗಿರಿ. ಜಯ ಯಾಕೆ ಸಿಗಲ್ಲ ?
-ತಲಹರಟೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!