೧
ಕೈ ಕಡಿದು ಹಾಕಿದರೂ ಕಾಲುಗಳು ಭದ್ರ
ಅರ್ಧ ದೇಹ ಉಳಿಸಿದರೂ ನಾನು ಜೀವಂತ
ನೀ ಸೇವಿಸಿ ಬಿಟ್ಟದ್ದು ನನಗೆ ಅಮೃತ
ನಾ ಸೇವಿಸಿ ಬಿಟ್ಟದ್ದು ನಿನಗೆ ಅಮೃತ
ಎನಗಾದರೆ ನೀ ಕ್ರೂರಿ ನಿನ್ನವನತಿಗೆ ಅದು ದಾರಿ
ಎನ್ನ ಸಲಹಲು ನೀ ಪಾರು ಹಾಗಿದ್ದರೆ ಹೇಳು ನಾನ್ಯಾರು..
--------------
೨
ಮೇಲೊಂದು ಪರ್ವತ ಕೆಳಗಿಷ್ಟು ಗಾಲಿ
ಎಲ್ಲೆಂದರಲಿ ಉರುಳಿ ಒಯ್ಯುವೆನು ಕರೆದಲ್ಲಿ
ನಿನ್ನ ಕೈಗಳಿಗೆ ನನ್ನ ಕೈಗಳಾಸರೆ
ನನ್ನ ಕಾಲುಗಳಿಗೆ ನಿನ್ನ ಕಾಲ್ಗಳಾಸರೆ
ನಿನ್ನದೆಷ್ಟು ಹೈಟೋ ಅದಕ್ಕೆ ನಾ ಅಡ್ಜಸ್ಟು
ಹೇಳಿ ನಾನ್ಯಾರು ತಿಳಿದವರಿಷ್ಟು
ಪ್ರತಿಕ್ರಿಯೆ (2)