ರಜನೀಕಾಂತ್ ಕನ್ನಡಿಗರ ಕ್ಷಮೆ ಕೇಳಿದರೂ,

ನೆನ್ನೆ ಎಲ್ಲಾ ಚಾನಲ್ ಗಳಲ್ಲೂ ರಜನೀಕಾಂತ್ ಅವರೇ, ಕಾರಣ ಅವರು ಕನ್ನಡಿಗರ ಷಮೆ ಕೇಳಿದರು ಅಂತ, ಈ ವಿಷಯ ಕೇಳಿದಾಗಿನಿಂದ ಎಲ್ಲರಲ್ಲೂ ಒಂದು ಪ್ರಶ್ನೆ ಮೂಡುವುದಂತು ನಿಜ, ಕಾರಣ ರಜನೀಕಾಂತ್ ಅವರಿಗೆ ಇಲ್ಲಿಯವರೆಗೂ ತಾವೂ ತಪ್ಪು ಮಾಡಿದ್ದೆ ಎಂದು ಯಾಕೆ ಅನ್ನಿಸಿರಲಿಲ್ಲ, ಅದೂ ಅವರ ಕುಚೇಲನ್ ಚಿತ್ರ ಬಿಡುಗಡೆಯ ಸಮಯದಲ್ಲಿ ಮಾತ್ರ ಹೀಗನ್ನಿಸಲೂ ಕಾರಣವೇನು,

ಅದೇನೋ ಹೇಳುತ್ತಾರಲ್ಲ , " ಕಾರ್ಯವಾಸೇ ಕತ್ತೆ ಕಾಲಿಡಿ" ಅನ್ನೋ ಹಾಗಾಗುತ್ತಿದೆ ಅನ್ನಿಸೋಲ್ಲವೇ, ಬೆಂಗಳೂರಿನಲ್ಲಿ ಅವರ ಅಲ್ಲ ಕರ್ನಾಟಕದಲ್ಲಿ ಅವರ ಚಿತ್ರಗಳಿಗೆ ಸಿಗುವ ಒಪನಿಂಗ್ ಬೇರೆ ಕಡೆ ಸಿಗಲು ಕಷ್ಟ, ರಜನೀಕಾಂತ್ ಅವರ ಈ ಮನಸ್ಥಿತಿಯನ್ನು ನೋಡಿದರೆ ಅವರನ್ನು ಒಬ್ಬ ಒಳ್ಳೆ ಬಿಸಿನೆಸ್ ಮ್ಯಾನ್ ಅನ್ನಲಡ್ಡಿಯಿಲ್ಲ, ಎನಾದರೂ ಕನ್ನಡಿಗರ ಔದಾರ್ಯ ಮೆಚ್ಚಲೇ ಬೇಕಲ್ಲವೇ, ಎಷ್ಟೇ ಆದರೂ ನಾವು ಕನ್ನಡಿಗರೂ ಸಹೃದಯತೆಗೆ ಹೆಸರುವಾಸಿಯಾದವರೂ, ಕುಡಿಯೋ ನೀರನ್ನೆ ಅವರಿಗೆ ಬಿಟ್ಟು ಕೊಡುವ ನಾವು ಇನ್ನೂ ಚಿತ್ರ ಯಾವ ಲೆಕ್ಕ ಬಿಡಿ ಅಲ್ಲವಾ, ಆದರೆ ಕೆಟ್ಟ ಮೇಲಾದರೂ ಬುದ್ದಿ ಬಂತು ಅನ್ನೋ ಹಾಗೆ, ತಡವಾಗಾದರೂ ಬುದ್ದಿ ಬಂತು ಅಂತ ಸುಮ್ಮನಾಗ ಬೇಕಷ್ಟೆ.

ತಪ್ಪು ಮಾಡುವುದು ಸಹಜ, ಆದರೆ ಆ ತಪ್ಪನ್ನು ಮನ್ನಿಸಿ ಅವರಿಗೊಂದು ಅವಕಾಶ ನೀಡುವವರ ಮನಸ್ಸು ತುಂಬಾ ದೊಡ್ಡದು, ಕನ್ನಡಿಗರಾದ ನಾವು ಇಲ್ಲಿ ನಮ್ಮ ಹೃದಯ ವೈಶಾಲತೆಯನ್ನು ಸಾಬೀತು ಪಡಿಸಿದ್ದೇವೆ, ನಮ್ಮ ನಡೆ, ನುಡಿಗಳ ಬಗೆಗಿನ ಕಾಳಜಿಯನ್ನು ತೋರ್ಪಡಿಸಿದ್ದೇವೆ, ಈ ಕಾಳಜಿ ಸದಾ ನಮ್ಮಲ್ಲಿ ಜಾಗೃತವಾಗಿರಲಿ. ವ್ಯಕ್ತಿಗಿಂತ ನಾಡು ನುಡಿ ಮುಖ್ಯವಾಗುತ್ತೆ ಅಲ್ಲವಾ ?

ಕನ್ನಡಿಗರ ಬಗ್ಗೆ ಹಗುರವಾಗಿ ಮಾತನಾಡುವವರಿಗೆಲ್ಲಾ , ಈ ಪ್ರಕರಣ ಪಾಠ ಕಲಿಸಲಿ,

" ಸಿರಿಗನ್ನಡಂ ಗೆಲ್ಗೆ "