ಎನಿತೆನಿತೊ ಹೆಂಗಳ ಹಲರ ನೋಡಿದರೂ
ನಿನಗಿಂತ ಚೆಲುವೆಯರಿಲ್ಲ-
ವೆನುತೆನುತಲೋಲೈಸಿ ನುಡಿದೊಡಮೆನ್ನೆಡೆ
ಮನದನ್ನೆ ತಿರುಗಿ ನೋಡಳು