ಏನು ಹೇಳಲಿ ಮನವೇ


ತಿಳಿಯದು, ಹೊಳೆಯದು

ತಿಳಿದು ಹೊಳೆದರೂ ಸುಮ್ಮನಿರದು

ಹೊಳೆಯ ಸುಳಿಯಂತೆ

ತಿರುಗುತಿವೆ ನೆನಪು


ಸೆಳೆಯುತಿದೆ ಒಳಗೆ

ಬಲು ಆಳಕ್ಕೆ

ಅರೆಗತ್ತಲೆಯ ಮೋಡಿಗೆ

ತಿರುಗಿ ಬಾರದ ಹಾದಿಗೆ


ಬಯಕೆ, ಬಿನ್ನಾಣ, ನೆನಪು, ಕನಸು

ಸಿಹಿ, ಕಹಿ, ಒಗರು, ರುಚಿ

ಎಲ್ಲ ಬಲ್ಲೆಯೇನೆ? ಕೇಳುತಿಹೆ ನೀನು

ಏನು ಹೇಳಲಿ ನಾನು


ಮೇಲಕ್ಕೇರನೇ ಗೆಳತಿ

ಸುಳಿಯಲ್ಲಿ ಸಿಲುಕಿಹೆ ನಾನು

ಇಳಿದಿದ್ದೂ ತಿಳಿಯಲಿಲ್ಲ

ಹೊರಬರುವುದೂ ಗೊತ್ತಿಲ್ಲ


ಸುಳಿಗೆ ಸಿಲುಕಿಹೆನು

ಏನು ಮಾಡುವುದು?

ಹೇಗೆ ಬಿಡುವುದು?



ಪಲ್ಲವಿ ಎಸ್‌.