ಕತ್ತಲೆಯ ರಾತ್ರಿಯಲಿ ಮನಸಾಗಿದೆ ಕಪ್ಪು
ಆ ಕಪ್ಪು ಮನದಲ್ಲಿ ಬಿಳಿ ಚಂದ್ರ ನೀನು
ಬಿಳಿ ಚಂದ್ರ ಬೆಳಕಲ್ಲಿ ಕನಸುಗಳ ಗುಂಪು
ಆ ಕನಸು ರಾಶಿಯಲಿ ತುಂಬಿರುವೆ ನೀನು
ನಡುರಾತ್ರಿ ಬಯಲಲ್ಲಿ ಆ ಗೂಬೆ ಸದ್ದು
ನಾಯಿಗಳ ಒದರಾಟ ಬಾನೇಲ್ಲ ಗುಡುಗಾಟ
ನನಗೇನು ಅರಿವಿಲ್ಲ ಆ ಎಲ್ಲ ಗೊಣಗಾಟ
ಅಡುತಿಹೆ ನಾನು ಕನಸಲ್ಲಿ ನಿನ್ನೊಡನೆ ಆಟ
ತುಂಬಿರಲು ಕ್ಷಣ ಕ್ಷಣವು ಮನದಲಿ ಮೌನ
ಕನಸಲ್ಲಿ ಸಾಗುತಿದೆ ಪ್ರತಿ ರಾತ್ರಿ ಪಯಣ
ಕರಿ ಬಾನು ಕರಗಿ ಬಾನೇರಿ ಎಳೆಬಿಸಿಲ ಕಿರಣ
ದಿನ ಕಳೆವ ಯತ್ನದಲಿ ಮನಸಿನಾ ಮರುಮರಣ....
_____________________________
ಕತ್ತಲೆಯ ರಾತ್ರಿಯಲಿ ಮನಸಾಗಿದೆ ಕಪ್ಪು
ಆ ಕಪ್ಪು ಮನದಲ್ಲಿ ಬಿಳಿ ಚಂದ್ರ ನೀನು
ಬಿಳಿ ಚಂದ್ರ ಬೆಳಕಲ್ಲಿ ಕನಸುಗಳ ಗುಂಪು
ಆ ಕನಸು ರಾಶಿಯಲಿ ತುಂಬಿರುವೆ ನೀನು
ನಡುರಾತ್ರಿ ಬಯಲಲ್ಲಿ ಆ ಗೂಬೆ ಸದ್ದು
ನಾಯಿಗಳ ಒದರಾಟ ಬಾನೇಲ್ಲ ಗುಡುಗಾಟ
ನನಗೇನು ಅರಿವಿಲ್ಲ ಆ ಎಲ್ಲ ಗೊಣಗಾಟ
ಅಡುತಿಹೆ ನಾನು ಕನಸಲ್ಲಿ ನಿನ್ನೊಡನೆ ಆಟ
ತುಂಬಿರಲು ಕ್ಷಣ ಕ್ಷಣವು ಮನದಲಿ ಮೌನ
ಕನಸಲ್ಲಿ ಸಾಗುತಿದೆ ಪ್ರತಿ ರಾತ್ರಿ ಪಯಣ
ಕರಿ ಬಾನು ಕರಗಿ ಬಾನೇರಿ ಎಳೆಬಿಸಿಲ ಕಿರಣ
ದಿನ ಕಳೆವ ಯತ್ನದಲಿ ಮನಸಿನಾ ಮರುಮರಣ....
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!