ಕಣ್ಣೀರ ಧಾರೆ ನಂಗೇಕೆ

ಎನ್ನುವ  ಮನಕೆ...


ಮನದ  ಭಾವ-ಅಭಾವಗಳ  ಭಾವ;

ಮನದ ತರಂಗಗಳ  ನುಡಿ ;

ಸಾಗರದಲೆಗಳ  ದನಿ ;


ಆಸೆ - ಆಕಾಂಕ್ಷೆ - ಗೆಲುವುಗಳ

ಹೊನ್ನುಡಿ ;

ನೋವು-ಹತಾಶೆ-ಸೋಲುಗಳ

ಬೆನ್ನುಡಿ ;

ಮನಧರೆಯ  ಜ್ವಾಲಾಮುಖಿ

ಸೋಕಿಸದೆ  ತಟ್ಟುವ  ತಪರಾಕಿ ;


ಕಲ್ಲಾದ  ಮನಕೆ  ಬದುಕ ಸಿಂಚನ ;

ಅರಳುವ  ಮನಕೆ  ಅರಳಿದ  ಹೂಬನ ;

ದೂರ  ಸರಿದ  ಮನಗಳ

ಸೇತುವೆ ;

ಉತ್ಕಟಾಭಿಮಾನಗಳ

ಬಂಧುವೆ ;

ಈ ಪನ್ನೀರು

ಈ ಕಣ್ಣೀರು !


---ಅಮರ್