ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ
ಗೆಳತಿ ನಿನ್ನ ಮಧುರ ದ್ವನಿ ನನಗಿಷ್ಟ, ಆ ನವಿರಾದ ಕೇಶಗಳು ಬಲು ಇಷ್ಟ
ಆದರೆ ನಾ ಹೇಳೇಇಲ್ಲ ಗೆಳತಿನಿನಗೆ ಇವೆಲ್ಲಕ್ಕಿಂತ ಮಿಗಿಲಾಗಿ ನಾ ಮೆಚ್ಚಿದ್ದು
ನಿನ್ನ ಈ ಮೂಕ ನೋಟವನ್ನು, ಅದಕ್ಕೆ ನೂರು ಭಾವಗಳನರೋಪಿಸುವ ಚೆಲುವ ಕಂಗಳನ್ನು
ನೀ ಸನಿಹ ಸುಳಿದಾಗ ನನ್ನಲ್ಲಿ ಸಂತಸದ ಚಿಲುಮೆಯೇನು ಆಗಲಿಲ್ಲ, ಆದರೆ ಅದೇನೋ ಹೊಸ ಅನುಭವ
ಗೆಳತಿ ನಿನ್ನ ಹುಸಿನಗೆಯಾಗಲಿ, ಬಿರು ನೋಟವಾಗಲಿ ಅದೇಕೊ ನನ್ನ ಸೆಲೆಯಲೆಯಿಲ್ಲ
ನೀ ಎದುರಾದಾಗೆಲ್ಲ ಗೆಳತಿ ನಾ ಗಮನಿಸದೆ ನಡೆಯೋದು, ನೀ ನನ್ನಮರೆಯಲಿಯೆಂದೇನು ಅಲ್ಲ
ನಾ ನಿನ್ನ ಪ್ರೀತಿಯಲ್ಲಿ ಎಷ್ಟು ಬರಿ ಬಿದ್ದನೆಂಬ ಲೆಕ್ಕ ತಪ್ಪಿ ಹೋಗುವುದೆಂಬ ಭಯದಿಂದ ಅಷ್ಟೆ
ಈ ಪ್ರೀತಿಯಲ್ಲಿ ನನ್ನ ಭಾವ ಬಿಟ್ಟರೆ ಹೊಸತೇನು ಇಲ್ಲ
ಗೆಳತಿ ನೀ ನನ್ನ ಪ್ರೇಯಸಿ ಎನ್ನುವುದರ ಹೊರತು ವಿಶೇಷವೇನುಯಿಲ್ಲ
ನನ್ನ ಭಾವನೆಗಳನ್ನು ನಿನ್ನಲ್ಲಿ ಹೇಳಲಾಗಿಲ್ಲ ಗೆಳತಿ
ಏನು ಹೇಳಬೇಕೆಂಬ ಪ್ರಶ್ನೆಗಳೇನು ಕಾಡಿಲ್ಲ ನನಗೆ
ಹೇಗೆ ಹೇಳಬೇಕೆಂಬ ಯಾತನೆಯಲ್ಲಿ ಕಳೆದಿರುವೆ
ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ
ಕಡೆಗೆ ನನ್ನ ಭಾವಗಳನ್ನು ನಿನಗೆ ದಾಟಿಸದಾಕ್ಷಣ ಈ ಭಾವ ಸುಳ್ಳಲ್ಲ
ನೀನಿದ್ದನ್ನು ಓದದಿರದಾಕ್ಷಣ ಈ ಸಾಲುಗಳು ಸೋಲಲ್ಲ
ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ
ಪ್ರತಿಕ್ರಿಯೆ (1)