ನೀಬರೆದ ಸಾಲೊಂದು ಕಾಡಿದೆ ಇಂದು
ನೀ ತೊರೆದ ನಗೆಯೊಂದು ಸೆಳೆದಿದೆ ನನ್ನ
ನಾ ಪಡೆದ ಮುತ್ತೊಂದುಬೇಡಿದೆ ನಿನ್ನ
ನೋವು ನಲಿವಿನ ನಿನ್ನೆ ಕರೆಯಾಗಿದೆ
ನಾವು ನೆನೆದ ಮುಂಗಾರು ಮತ್ತೆ ಬಂದ ಹಾಗಿದೆ
ಮತ್ತೊಮ್ಮೆ ನಿನ್ನದೇ ನೆನಪಾಗಿದೆ
ನಾವು ಬೇಡಿದ ಮಳೆ ಹನಿಗಳು ತೊಯ್ದಿದೆ ನನ್ನ
ಒಲವಿನ ಬಣ್ಣ ಕಳುವಾಗಿದೆ
ಮಾತು ಮೌನಗಳ ಮಿಂಚಾಗಿದೆ
ಹನಿಗಳು ಕಳೆದ ಮೇಲೂ ನೆನೆಯುವ ಆಸೆಯಾಗಿದೆ
ಕರಗಿ ಹೋದ ಕ್ಷಣವೊಂದು ಸೇರಿದೆ ನನ್ನ
ಸ್ವಲ್ಪ ತಾಳು ನೆನಪಿನ ಪುಟಗಳು ಹಾರಿದೆ
ಪ್ರತಿಕ್ರಿಯೆ (2)